ಕೊಟ್ಟಿಗೆಹಾರ:ಗ್ರಾಮಾಭಿವೃದ್ದಿಗೆ ಗುಣಮಟ್ಟದ ರಸ್ತೆಗಳು,ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಅಗತ್ಯವಿದೆ.ಈ ನಿಟ್ಟಿನಲ್ಲಿ ಗುಣಮಟ್ಟದ ಸೇತುವೆ ನಿರ್ಮಾಣದ ಕಾಮಗಾರಿ ನಡೆಸಬೇಕು’ ಎಂದು ತರುವೆ ಗ್ರಾ.ಪಂ.ಅಧ್ಯಕ್ಷೆ ಸುಶೀಲ ಗೋಪಾಲ್ ಹೇಳಿದರು.
ಅವರು ಕೊಟ್ಟಿಗೆಹಾರದ ತರುವೆಯ ಸೋಮಾವತಿ ಹಳ್ಳಕ್ಕೆ ನೂತನ ಸೇತುವೆ ಕಾಮಾಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮಗಳಲ್ಲಿನ ಜನರಿಗೆ ಮೂಲಭೂತ ವ್ಯವಸ್ಥೆ ವಂಚಿತವಾಗಬಾರದು.ಕೃಷಿ ಗದ್ದೆಗಳಿಗೆ ಸಾಗಲು ಕೂಡ ಈ ರಸ್ತೆ ಅನುಕೂಲವಾಗಿದೆ.ರೂ30ಲಕ್ಷ ವೆಚ್ಚದ ಯೋಜನೆಯ ರಸ್ತೆ ಜನರಿಗೆ ದೀರ್ಘ ಬಾಳಿಕೆ ಬರಬೇಕು’ಎಂದರು.
ಮಾಜಿ ಗ್ರಾ.ಪಂ.ಅಧ್ಯಕ್ಷ ಬಿ.ಎಂ.ಸತೀಶ್ ಮಾತನಾಡಿ’ ಪಂಚಾಯಿತಿಯ ವತಿಯಿಂದಲೂ ಈ ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿತ್ತು.ಆದರೆ ಸಾರ್ವಜನಿಕರ ಆಗ್ರಹವೂ ಇದ್ದ ಕಾರಣ ಶಾಸಕರು ಅನುದಾನ ಬಿಡುಗಡೆ ಮಾಡಿದ್ದಾರೆ’ಎಂದರು.
ಸೇತುವೆ ನಿರ್ಮಾಣದ ಭೂಮಿ ಪೂಜೆಯನ್ನು ಅರ್ಚಕ ರಾಮಕೃಷ್ಣ ಕಾರಂತ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಚ್.ಜಿ.ಸುರೇಂದ್ರಗೌಡ,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ವರೂಪ, ಸದಸ್ಯರಾದ ಎ.ಎನ್.ರಘು,ಸ್ಮಿತಾ,ಮುಖಂಡರಾದ ಅಬ್ದುಲ್ ಅಜೀಜ್, ಟಿ.ಬಿ.ವಿಜೇಂದ್ರ, ಗೋಪಾಲ್, ಟಿ.ಜಿ.ಪ್ರಶಾಂತ್, ರಾಮಚಂದ್ರೇಗೌಡ, ರಿಜ್ವಾನ್, ಇಂಜೀನಿಯರ್ ಪದ್ಮಾನಂದನ್ ಭಟ್, ಸುಧಾಕರ, ಪ್ರವೀಣ್,ಹಾಗೂ ಗುತ್ತಿಗೆದಾರರು ಇದ್ದರು.
———-——-ಆಶ ಸಂತೋಷ್ ಅತ್ತಿಗೆರೆ