ಚಿಕ್ಕಮಗಳೂರು-ಪರಿಸರ ಸಂರಕ್ಷಣೆಯ ದಾರಿದೀಪ,ವೃಕ್ಷ ಮಾತೆ,ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ನಿಧನ ನಿಮಿತ್ತ ಚಿಕ್ಕಮಗಳೂರು ನಗರದ ಎಸ್.ಡಿ.ಎಂ ಶಾಲೆಯ ಆವರಣದಲ್ಲಿ ಪೂಜ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿಯ ಮುಖೇನ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರು ಆದ ಮಂಜುನಾಥ್,ಶಾಲೆಯ ಮುಖ್ಯೋಪಾಧ್ಯಾಯರಾದ ನವಿತ,ಶಿಕ್ಷಕ ವೃಂದ ಹಾಗೂ ಶಾಲೆಯ ಮಕ್ಕಳು ಹಾಜರಿದ್ದರು.