ಹೊಳೆನರಸೀಪುರ-ತಾಲ್ಲೂಕಿನ ಹಳೇಕೋಟೆ ಹೋಬಳಿ ಬನಕುಪ್ಪೆ ಗ್ರಾಮದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಘಟಕದವರು ಪುನಶ್ಚೇತನ ಗೊಳಿಸಿ ಸಾರ್ವಜನಿಕರ ಬಳಿಕೆಗೆ ಅರ್ಪಿಸಿದರು.
ಸಂಸ್ಥೆಯ ಜಯರಾಮ್ ನೆಲ್ಲಿತ್ತಾಯ, ಕೇಶವ್ ದೇವಾಂಗ್, ಚನ್ನರಾಯಪಟ್ಟಣ ಯೋಜನಾಧಿಕಾರಿ ಪ್ರಸಾದ್, ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಕೆರೆ ಸಮಿತಿ ಅಧ್ಯಕ್ಷ ರವಿಕುಮಾರ್, ಪಂಚಾಯ್ತಿಯ ಯೋಗಣ್ಣ, ಸಹಾಯಕ ನಿರ್ದೇಶಕ ಅರುಣ್, ಪಿ.ಎಲ್. ಡಿ ಬ್ಯಾಂಕ್ ಅಧ್ಯಕ್ಷ ಪದ್ಮರಾಜ್, ದೊಡ್ಡಕುಂಚೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಬಿ.ವಿ. ರವಿಕುಮಾರ್, ಕೆ.ಎಂ. ದಿನೇಶ್, ನಂಜೇಶ್, ಶಿವಕುಮಾರ್, ರೇವಣ್ಣ, ಲಿಂಗರಾಜು ಸುಜಾತಾ ಭಾಗವಹಿಸಿದ್ದರು.
—————–ಸುಕುಮಾರ್