ಕನಕಪುರ-ಸುತ್ತೂರಿನ ಜಾತ್ರಾ ಮಹೋತ್ಸವ ಪ್ರಚಾರದ ರಥ ಕನಕಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀ ದೇಗುಲದ ಪರಮಪೂಜ್ಯ ಡಾ.ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.
ಕನಕಪುರ ತಾಲೂಕಿನ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು,ಸುತ್ತೂರಿನ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶ ಕೇಂದ್ರ ಮಹಾಸ್ವಾಮಿಗಳವರ ಸಂಕಲ್ಪ ನೆರವೇರಲಿ.ತಾಲೂಕಿನಿಂದ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಕ್ತಾದಿಗಳಿಗೆ ಸೂಚಿಸಿದರು.
ಪ್ರಚಾರ ಸಮಿತಿಯ ಸಂಚಾಲಕರಾದ ಪಂಚಾಕ್ಷರಿಯವರು ಮಾತನಾಡಿ,ಸುತ್ತೂರಿನಲ್ಲಿ 2025 ರ ಜನವರಿ 26 ರಿಂದ 31 ರವರಿಗೆ ಆರು ದಿನಗಳ ಕಾಲ ನಡೆಯಲಿರುವ ಜಾತ್ರ ಮಹೋತ್ಸವದಲ್ಲಿ,ರಥೋತ್ಸವ, ಕೊಂಡೋತ್ಸವ, ಲಕ್ಷ ದೀಪೋತ್ಸವ, ತೆಪ್ಪೋತ್ಸವ, ಅನ್ನಬ್ರಹ್ಮೋತ್ಸವ, ಸಾಮೂಹಿಕ ವಿವಾಹ ಮಹೋತ್ಸವ, ಭಜನಾ ಮೇಳ, ವಸ್ತುಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯಾಚಿತ್ರ ಸ್ಪರ್ಧೆ ಮೊದಲಾದವುಗಳು ಜರುಗುತ್ತವೆ.ವರ್ಣರಂಜಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ನಡೆಯಲಿವೆ.
ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಕೃಪೆಗೆ ಪಾತ್ರರಾಗಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಗ್ಗಲಿಪುರ ಶ್ರೀಗಳು, ಪ್ರಚಾರ ಸಮಿತಿಯ ಹರೀಶ್, ಮಂಜುನಾಥ, ರಾಜಶೇಖರ್, ಭರತ್, ಮಹಾದೇವ ಪ್ರಸಾದ್, ಸೋಮಶೇಖರ್ ಮತ್ತು ಶಿಕ್ಷಕ ವೃಂದ ವಿದ್ಯಾರ್ಥಿಗಳು ಶ್ರೀಮಠದ ಭಕ್ತರು ಇದ್ದರು.