ತುಮಕೂರು:ತುಮಕೂರು ನಗರದ ಹಿರಿಯ ಸಮಾಜಸೇವಕರಾದ ಪಿ.ಎಸ್.ಚಂದ್ರಮೋಹನ್ (65) ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.ಅವರು ಶಿಕ್ಷಣ ಪ್ರೇಮಿಯಾಗಿದ್ದರು,ಬಡವರು,ದೀನರು,ಮಕ್ಕಳ ಬಗ್ಗೆ ಅಪಾರ ಪ್ರೇಮವನ್ನು ಹೊಂದಿದ್ದರು.
ಪಿ.ಎಸ್.ಚoದ್ರಮೊಹನ್ ರವರ ತಂದೆ ದಿವಂಗತ ಕೆ.ಸುಬ್ಬರಾಯರವರು ನಿವೃತ್ತ ಎಇಓ ಆಗಿದ್ದು,ತಾಯಿ ದಿವಂಗತ ಸರೋಜಮ್ಮನವರು ಇಬ್ಬರೂ ಸಹ ಶಿಕ್ಷಣಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು.ತಮ್ಮ ಪ್ರಾಥಮಿಕ ಶಿಕ್ಷಣವನ್ನು ತುರುವೇಕೆರೆ, ಗುಬ್ಬಿಯಲ್ಲಿ ಪಡೆದು ಪಿಯುಸಿಯನ್ನು ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪಡೆದು ಬಿಇ(ಸಿವಿಲ್) ಪದವಿಯನ್ನು ಶ್ರೀ ಸಿದ್ಧಗಂಗಾ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಡೆದು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆಗೆ ಸೇರಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ 36ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಅವರಿಗೆ ಇಬ್ಬರು ಮಕ್ಕಳಿದ್ದು ಹಿರಿಯ ಮಗ ಟಿ.ಸಿ.ಚೇತನ್ ರವರು ಬಿ.ಇ. (ಕಂಪ್ಯೂಟರ್ ಸೈನ್ಸ್) ಪದವೀಧರರಾಗಿದ್ದು ಕೆನಡಾ ದೇಶದಲ್ಲಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದಾರೆ.ಮಗಳು ಸಹ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಶ್ರೀಯುತರು ಹೆಂಡತಿ, ಮಕ್ಕಳು,ಅಪಾರ ಸ್ನೇಹಿತರು,ಅಕ್ಕ,ತಮ್ಮ,ಬoಧುವರ್ಗದವರನ್ನು ಬಿಟ್ಟು ಅಗಲಿದ್ದಾರೆ.
ಶ್ರೀಯುತರ ನಿಧನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ,ಶಾಸಕ ಜಿ.ಬಿ.ಜ್ಯೋತಿಗಣೇಶ್,ಮಾಜಿ ಶಾಸಕ ಡಿ.ಸಿ.ಗೌರಿ ಶಂಕರ್,ಡಾ||ಎಸ್.ರಫೀಕ್ ಅಹಮದ್,ತಿಪಟೂರು ಜೆಡಿಎಸ್ ಮುಖಂಡ ಶಾoತಕುಮಾರ್,ಕಾoಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅಹಮದ್,ಮುರಳೀಧರ ಹಾಲಪ್ಪ,ಹಿರಿಯ ವಕೀಲರು,ನ್ಯಾಯಾಧೀಶರು,ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಿಗ್ಗೆ 10ಗಂಟೆಗೆ ಅವರ ಅಂತಿಮ ವಿಧಿವಿಧಾನಗಳು ತುಮಕೂರು ನಗರದ ಗಾರ್ಡನ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
——————ಕೆ.ಬಿ ಚಂದ್ರಚೂಡ