ತುಮಕೂರು-ಸವಿತಾ ಸಮಾಜದ ಸಮಗ್ರ ಏಳ್ಗೆಗಾಗಿ ಹೋರಾಟ ನಡೆಸುತ್ತಿರುವ ಕಟ್ ವೆಲ್ ರಂಗನಾಥ್-ಧನೀಯಕುಮಾರ್‌

ತುಮಕೂರು-ನಗರದ ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ಸವಿತಾ ಸಮಾಜ ಸೇವಾ ಟ್ರಸ್ಟ್ (ರಿ.) ಹಾಗೂ ಸವಿತಾ ಸಮಾಜ ಜಿಲ್ಲಾ ಸಂಪರ್ಕ ಕೇಂದ್ರ ವತಿಯಿಂದ ಬೋಟಾಪ್ಲಾಸ್ಟ್ ಕಂಪನಿಯ ಪ್ರಾಯೋಜಕತ್ವದಲ್ಲಿ ಸವಿತಾ ಸಮಾಜದ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವವರಿಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ತುಮಕೂರು ಜಿಲ್ಲಾ ಸವಿತಾ ಸಮಾಜ ಸೇವಾ ಟ್ರಸ್ಟ್ (ರಿ.)ನ ಜಿಲ್ಲಾಧ್ಯಕ್ಷರಾದ ಕಟ್‌ವೆಲ್ ರಂಗನಾಥ್‌ರವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರಪಂಚವು ಆಧುನಿಕತೆಯತ್ತ ಸಾಗುತ್ತಿದೆ.ಆದರೆ ನಮ್ಮ ಸವಿತಾ ಸಮಾಜದ ಹಲವಾರು ಜನರು ಕುಲ ವೃತ್ತಿಯನ್ನು ಇನ್ನೂ ಆಧುನಿಕರಣ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದು, ಅವರುಗಳನ್ನು ಆಧುನಿಕತೆಯಡೆಗೆ ಕೊಂಡೊಯ್ಯವುದರ ಸಲುವಾಗಿ ಈ ಕಾರ್ಯಗಾರವನ್ನು ಬೋಟಾಪ್ಲಾಸ್ಟ್ ಕಂಪನಿಯ ಸಹಯೋಗದೊoದಿಗೆ ಹಮ್ಮಿಕೊಳ್ಳಲಾಗಿದೆ.

ಈ ಮೂಲಕ ಸವಿತಾ ಸಮಾಜದ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರುವವರಿಗೆ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕ್ಷೌರಿಕ ವೃತ್ತಿಯಲ್ಲಿ ಆಧುನಿಕ ತಾಂತ್ರಿಕ ಉಪಕರಣಗಳು ಬಳಕೆಯಾಗುತ್ತಿದ್ದು, ಅದನ್ನು ಕ್ಷೌರಿಕ ವೃತ್ತಿಯಲ್ಲಿ ಅಳವಡಿಸಿಕೊಂಡು ವೃತ್ತಿಯನ್ನು ಆಧುನಿಕರಣ ಗೊಳಿಸಿಕೊಳ್ಳಬಹುದು ಎಂದರಲ್ಲದೇ, ಅಧುನಿಕರಣಕತೆಗೆ ತಾವು ತೊಡಗಿಸಿಕೊಳ್ಳದೇ ಹೋದಲ್ಲಿ ವೃತ್ತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಹಾಗಾಗಿ ಪ್ರಸ್ತುತದ ಆಧುನಿಕತೆಯನ್ನು ಅಳವಡಿಸಿಕೊಂಡು ವೃತ್ತಿಯನ್ನು ಅಭಿವೃದ್ಧಿಗೊಳಿಸಿಕೊಂಡಲ್ಲಿ ತಾವೂ ಸಹ ಸಮೃದ್ಧಿಯಾಗುವ ಅವಕಾಶಗಳು ಬಹಳಷ್ಟಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಟ್‌ವೆಲ್ ಸಲೂನ್ ವತಿಯಿಂದ ಕ್ಷೌರಿಕರಿಗೆ ಆಧುನಿಕ ಟ್ರಿಮ್ಮರ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಇತ್ತೀಚೆಗೆ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಪಿ.ಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಅವರನ್ನು ಸನ್ಮಾನಿಸಿ, ಗೌರವಿಸಿ ಮಾತನಾಡಿದ ಕನ್ನಡ ಸೇನೆ ಜಿಲ್ಲಾದ್ಯಕ್ಷರಾದ ಧನೀಯ ಕುಮಾರ್‌ರವರು, ಇತ್ತೀಚಿನ ದಿನಗಳಲ್ಲಿ ಸವಿತಾ ಸಮಾಜದಿಂದ ಹಲವಾರು ಜನಪಯೋಗಿ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ನಾನು ಕಾಣುತ್ತಿದ್ದೇನೆ.ಅದಕ್ಕೆ ಕಾರಣ ಕಟ್‌ವೆಲ್ ರಂಗನಾಥ್ ಎಂಬ ಯುವಕ.ಅತ್ಯಂತ ಚುರುಕಾಗಿ ಎಲ್ಲಾ ಕಡೆ ಓಡಾಡುತ್ತಾ, ಸವಿತಾ ಸಮಾಜವನ್ನು ಸಂಘಟನಾತ್ಮಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವಾಗಿದೆ.

ಎಷ್ಟೋ ಜನಕ್ಕೆ ಸವಿತಾ ಸಮಾಜ ಎಂದರೇ ಗೊತ್ತಿರಲಿಲ್ಲ, ಅದನ್ನು ಪರಿಚಯಿಸಿಕೊಟ್ಟ ಕೀರ್ತಿ ಈ ಹುಡುಗನಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಕಾರ್ಯಗಾರದಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸವಿತಾರತ್ನ ಪ್ರಶಸ್ತಿ ಪುರಸ್ಕೃತರಾದ ಗುಬ್ಬಿ ಪಾಪಣ್ಣ, ಬಿಜೆಪಿ ಓಬಿಸಿ ಮೋರ್ಚದ ಅಧ್ಯಕ್ಷರಾದ ಹನುಮಂತರಾಜು, ಬಿಜೆಪಿ ಮುಖಂಡರುಗಳಾದ ನವಚೇತನ್, ಸತ್ಯಮಂಗಲ ಜಗದೀಶ್, ಮುಕುಂದರಾಜ್, ಎ.ಎಸ್.ಸುರೇಶ್, ಶಿವಸ್ವಮಿ, ದೇವರಾಜ್ನಾ ಯ್ಡು, ಒ.ಕೆ.ರಾಜು ಸೇರಿದಂತೆ ಬೋಟಾಪ್ಲಾಸ್ಟ್ ಕಂಪನಿಯ ಸದಸ್ಯರು ಹಾಗೂ ಸವಿತಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?