ಕೊರಟಗೆರೆ:-ಕಲಿಯುಗ ದೇವತೆ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ವರಪುತ್ರಿ ಕಮಲಮ್ಮನವರ 22ನೇ ವರ್ಷದ ಆರಾಧನಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತಾದಿಗಳ ಸಮಕ್ಷಮದಲ್ಲಿ ನೆರವೇರಿತು.
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಸನ್ನಿಧಿಯ ಶ್ರೀ ಕಮಲಮ್ಮನವರ ಬೃಂದಾವನದಲ್ಲಿ ತಾಯಿ ಕಮಲಮ್ಮನವರ 22ನೇ ವರ್ಷದ ಆರಾಧನಾ ಮಹೋತ್ಸವವನ್ನ ಬಹಳ ವಿಜೃಂಭಣೆಯಿಂದ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯ ಉದ್ಭವ ಮೂರ್ತಿಯ ಪ್ರತಿಷ್ಠಾಪಿಸಿದಂತ ಕಮಲಮ್ಮನವರು ದೇವಸ್ಥಾನ ಇಷ್ಟೊಂದು ಪ್ರಬುದ್ಧಮಾನಕ್ಕೆ ಬರಲು ಮೂಲ ಕಾರಣೀಭೂತರಾಗಿದ್ದು,ಅವರನ್ನು ಭಕ್ತಾದಿಗಳು ಸಾಕ್ಷಾತ್ ಲಕ್ಷ್ಮಿ ದೇವತೆ ಎಂಬಂತೆ ಪೂಜಿಸುತ್ತ ಬಂದಿದ್ದಾರೆ.
ಕಮಲಮ್ಮನವರ ದೇವಸ್ಥಾನದಲ್ಲಿ 22ನೇ ವರ್ಷದ ಆರಾಧನಾ ಮಹೋತ್ಸವದ ಪ್ರಯುಕ್ತ ದೇವಸ್ಥಾನದ ತುಂಬೆಲ್ಲ ಹೂವಿನ ಅಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿತ್ತು.ಕಮಲಮ್ಮ ರವರ ವಿಗ್ರಹವನ್ನು ಇದೆ ಸಂದರ್ಭದಲ್ಲಿ ಸ್ಥಾಪಿಸಲಾಯಿತು.ಇದಲ್ಲದೆ ಕಮಲಮ್ಮನವರ ಆಶಯದಂತೆ ದತ್ತಾತ್ರೇಯ ದೇವರ ಪ್ರತಿಷ್ಠಾಪನೆ ಸಹ ನೆರವೇರಿಸಲಾಯಿತು.
ಶ್ರೀ ಕಮಲಮ್ಮನವರ 22ನೇ ವರ್ಷದ ಆರಾಧನಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಭಕ್ತಾದಿಗಳು ಬಹಳ ಸಂಖ್ಯೆಯಲ್ಲಿ ಆಗಮಿಸಿದ್ದರು.ಕಮಲಮ್ಮನವರಿಂದಲೇ ಈ ಕ್ಷೇತ್ರ ಅಭಿವೃದ್ಧಿ ಕಾಣಲು ಕಾರಣವಾಯಿತು.ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಿದ್ದು ಕಮಲಮ್ಮನವರ ಪುತ್ರ ಪ್ರಸನ್ನ ಕುಮಾರ್ ಹಾಗು ನಾವು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿದ್ದೇವೆ.
ಲಲೀತಮ್ಮ ಪ್ರಸನ್ನ ಕುಮಾರ್
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕರ ಮಡದಿ .
ಶ್ರೀ ಕಮಲಮ್ಮನವರ ಸೇವೆಯನ್ನ ಕಳೆದ 27 ವರ್ಷಗಳಿಂದ ಮಾಡುತ್ತಿದ್ದೇವೆ.ನಾವು ಗೊರವನಹಳ್ಳಿಗೆ ಬಂದಂತಹ ಸಂದರ್ಭದಲ್ಲಿ ನಮಗೆ ಏನು ಇರಲಿಲ್ಲ. ಅಜ್ಜಿ ಅವರ ಆಶೀರ್ವಾದದಿಂದ ನಾವು ಮುಂದುವರೆದಿದ್ದೇವೆ.22ನೇ ಆರಾಧನೆ ಪ್ರಯುಕ್ತ ಕಮಲಮ್ಮನವರ ವಿಗ್ರಹ ಪ್ರತಿಷ್ಠಾಪಿಸ ಲಾಯಿತು.
ಈ ಬೃಂದಾವನಕ್ಕೆ ಆಗಮಿಸಿ ಅಜ್ಜಿ ಅವರ ಆಶೀರ್ವಾದ ಪಡೆದ ಕಂಕಣ ಭಾಗ್ಯ ಇಲ್ಲದ ಬಹಳಷ್ಟು ಹೆಣ್ಣು ಮಕ್ಕಳಿಗೆ ಕಂಕಣ ಭಾಗ್ಯ ದೊರೆತಿದೆ. ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ದೊರೆತಿದೆ. ಇವೆಲ್ಲವುಗಳಿಂದ ಹೆಚ್ಚಿನ ಭಕ್ತಾದಿಗಳು ಕಮಲಮ್ಮನವರ ಬೃಂದಾವನಕ್ಕೆ ಬಂದು ತಾಯಿ ಆಶೀರ್ವಾದ ಬೇಡುವುದು ಸಾಮಾನ್ಯವಾಗಿದೆ.
ಅನಿಲ್,
ಅರ್ಚಕರು ಕಮಲಮ್ಮನವರ ಸನ್ನಿಧಿ.
——————-–ಪ್ರದೀಪ್ ಮಧುಗಿರಿ