ಮೈಸೂರು-‘ಮೈಸೂರು ಬೇಕಿಂಗ್ ಕೋ’ ಬೇಕರಿ ತಿನಿಸುಗಳ ಔಟ್ ಲೆಟ್ ನಗರದ ಸರಸ್ವತಿಪುರಂ ನಲ್ಲಿ ಪ್ರಾರಂಭಗೊಂಡಿದೆ.
ಮೊಕ್ಷಾ ಶರ್ಮಾ,ಅಭಿಲಾಷ್,ಸಂಜಯ್,ದಿನೇಶ್ ಅವರ ತಂಡ ನೂತನವಾಗಿ ಪ್ರಾರಂಭಿಸಿರುವ ‘ಮೈಸೂರು ಬೇಕಿಂಗ್ ಕೋ’ ಮೈಸೂರಿಗರಿಗೆ ವಿದೇಶಗಳಲ್ಲಿ ಸಿಗುವ ಸಿಹಿ ತಿನಿಸುಗಳನ್ನು ಇಲ್ಲಿಯೇ ನೀಡಲಿದೆ.
30ರೂಪಾಯಿಗಳಿಂದ ಹಿಡಿದು 2500 ರೂಪಾಯಿಗಳವರೆಗಿನ ಸಿಹಿ ಮತ್ತು ಖಾರದ ಬಗೆಬಗೆಯ ದೇಶೀ-ವಿದೇಶಿ ತಿನಿಸುಗಳು ಇಲ್ಲಿ ದೊರೆಯಲಿವೆ.
ವಿದೇಶದಲ್ಲಿ ಬೇಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾಭ್ಯಾಸ ಪಡೆದು ಬಂದಿರುವ ಮೋಕ್ಷ ಶರ್ಮ ಬಗೆ ಬಗೆಯ ತಿನಿಸುಗಳನ್ನು ಮಾಡುವ ಪರಿಣಿತಿ ಹೊಂದಿದ್ದಾರೆ.
ಇಂದು ‘ಮೈಸೂರು ಬೇಕಿಂಗ್ ಕೋ’ವನ್ನು ಮೊಕ್ಷಾ ಶರ್ಮಾ,ಅಭಿಲಾಷ್,ಸಂಜಯ್,ದಿನೇಶ್ ರವರ ಕುಟುಂಬಸ್ಥರೇ ಸರಳವಾಗಿ ಉದ್ಘಾಟನೆ ನಡೆಸಿದ್ದು ವಿಶೇಷವಾಗಿತ್ತು.
——————–-ಮಧುಕುಮಾರ್