ಚಿಕ್ಕಮಗಳೂರು-ಭಾರತ ರತ್ನ,ಶೋಷಿತರ ಆಶಾದೀಪ ಡಾ|| ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಗೃಹಮಂತ್ರಿ ಅಮಿತ್ ಶಾ ಅವರನ್ನು ಪಕ್ಷದಿಂದ ಅಮಾನತ್ತು ಗೊಳಿಸಿ, ಸಚಿವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ದಸಂಸ ಮುಖಂಡರುಗಳು ಗುರುವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್, ಸಂಘಟನಾ ಸಂಚಾಲಕ ಹರೀಶ್, ಮುಖಂಡರುಗಳಾದ ಉಪ್ಪಳ್ಳಿ ಕೆ.ಭರತ್, ಫಾತೀಮಾ ಹಾಜರಿದ್ದರು.