ಹಾಸನ:ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ-ನ್ಯಾಷನಲ್ ಶೋಟೋ ಕನ್ ಕರಾಟೆ ಮಲ್ಟಿಪರ್ಪಸ್ ಫೆಡರೇಶನ್ ಶಾಲೆಗೆ ಸಮಗ್ರ ಪ್ರಶಸ್ತಿ

ಹಾಸನ:ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲೆಯ ನ್ಯಾಷನಲ್ ಶೋಟೋಕನ್ ಕರಾಟೆ ಮಲ್ಟಿಪರ್ಪಸ್ ಫೆಡರೇಶನ್ ಶಾಲೆಯ ವಿದ್ಯಾರ್ಥಿಗಳು ಕಥಾ ಮತ್ತು ಕುಮಿತೆ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ವಿಜೇತರಾಗುವುದರ ಜೊತೆಗೆ,ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಚಾಂಪಿಯನ್ಷಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.

ಬಿಂದ್ಯಾಶ್ರೀ, ವಿಸ್ಮಯ್, ಶ್ರವಂತ್, ಸಮೃದ್ಧ, ಕಿಶನ್ ರಾಜ್, ನಾಗವರ್ಧನ್, ಆದಿತ್ಯ, ಲಿಖಿತ್ ಗೌಡ, ಧ್ರುವ, ಪುನೀತ್, ಪ್ರಜ್ವಲ್, ಮೋಹಿತ್, ರುಧವ್, ಸುರಭಿ, ನಾಗಶ್ರೀ ಚಿನ್ನದ ಪದಕವನ್ನು ಪಡೆದರೆ, ಸಾನ್ವಿ, ರಕ್ಷಿತ್ ಪ್ರಿನ್ಸ್, ಚಿರಂತ್, ಸಿಂಚನ, ನೂತನ್ ಗೌಡ, ಸಂಪ್ರೀತ್, ಕಿರಣ್, ನೂತನ್ ಎ ಆರ್, ಶ್ರೇಯಸ್, ಚರಣ್, ಸಂಭ್ರಮ್, ವಿಶ್ವಾಸ್ ಬೆಳ್ಳಿಯ ಪದಕವನ್ನು,ರೋನಕ್, ದರ್ಶನ್, ಪ್ರೀತಮ್, ಯಶ್ವಂತ್, ಶಮಿತ್ ಇವರುಗಳು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಕರಾಟೆ ಶಿಕ್ಷಕರಾದ ಸೆನ್ಸೈ ಸುಮಂತ್ ಮತ್ತು ಸೆನ್ಸೈ ವಿಶ್ವಂತ್ ರವರು ಮಕ್ಕಳಿಗೆ ಹೆಚ್ಚಿನ ಶ್ರಮವಹಿಸಿ ಈ ಪಂದ್ಯಾವಳಿಗೆ ತಯಾರಿ ಮಾಡಿದ್ದು ಮಕ್ಕಳ ಯಶಸ್ಸಿಗೆ ಪಾತ್ರರಾಗಿದ್ದಾರೆ.ನ್ಯಾಷನಲ್ ಶೋಟೋಕನ್ ಕರಾಟೆ ಮಲ್ಟಿಪರ್ಪಸ್ ಫೆಡರೇಶನ್ ಸಂಸ್ಥೆಯ ಅಧ್ಯಕ್ಷರಾದ ಶಿಹಾನ್ ಅನಂತ್ ಕುಮಾರ್ ಕೆ ಜೆ ರವರು ಮತ್ತು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗದವರು ಮತ್ತು ಪೋಷಕರು ಮಕ್ಕಳಿಗೆ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?