ಮಧುಗಿರಿ-ಅಕ್ರಮ ಶೇಂದಿ ದಂದೆಕೋರರ ವಿರುದ್ಧ ಸಮರ ಸಾರಿರುವ ಅಭಕಾರಿ ಪೊಲೀಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ.
ರಾತ್ರಿ ಸಮಯದಲ್ಲಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು-ಚಂದನೂರು ರಸ್ತೆಯ ಶ್ರಾವಂಡನಹಳ್ಳಿ ಗ್ರಾಮದ ಧರ್ಮಶ್ರೀ ಪಬ್ಲಿಕ್ ಶಾಲೆಯ ಮುಂಭಾಗದಲ್ಲಿ ಅಬಕಾರಿ ಡಿ.ವೈ.ಎಸ್.ಪಿ ದೀಪಕ್ ಅವರ ನೇತೃತ್ವದಲ್ಲಿ ತಂಡ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಕಾರನ್ನು ತಪಾಸಣೆ ಮಾಡಿದಾಗ ಅದರಲ್ಲಿ ಬೃಹತ್ ಮಟ್ಟದ ಅಕ್ರಮ ಸೇಂದಿ ಸಾಗಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ.
ಅಕ್ರಮ ಸೆಂದಿ ಕಳ್ಳ ಸಾಗಾಣಿಕೆ ಮಾಡುತ್ತಿರುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಅಬಕಾರಿ ಡಿ.ವೈ.ಎಸ್.ಪಿ ದೀಪಕ್ ಹಾಗೂ ಸಬ್ ಇನ್ಸ್ಪೆಕ್ಟರ್ ಕರಿಬಸಪ್ಪ ಅವರು ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ವಹಿಸಿದ್ದು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ದೊಡ್ಡಮಟ್ಟದ ಅಕ್ರಮ ಸೇಂದಿ ಸಾಗಾಟ ಮಾಡುತ್ತಿದ್ದ ಆರೋಪಿ ಮಾಲು ಸಹಿತ ಸಿಕ್ಕಿಬಿದ್ದಿದ್ದಾನೆ.
ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿಯ ಬೊಮ್ಮಸಂದ್ರ ಗ್ರಾಮದ ಅಶೋಕ್ ಕುಮಾರ್ ಬಿನ್ ನಾಗಪ್ಪ ಎಂಬ ಆರೋಪಿಯನ್ನು ವಶಕ್ಕೆ ಪಡೆದಿರುವ ಅಭಕಾರಿ ಪೊಲೀಸರು ಕಾರು ಹಾಗು ಅದರಲ್ಲಿದ್ದ ಬರೋಬ್ಬರಿ,42,000 ಮೌಲ್ಯದ ಶೇಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆ ಸಂದರ್ಭದಲ್ಲಿ ಅಬಕಾರಿ ಸಿಬ್ಬಂದಿಗಳಾದ ರಾಜೇಶ್,ನಿಂಗಪ್ಪ ,ತೋರ್ಸಿ ಖಾನ್ ಇದ್ದರು.
———-—-ಪ್ರದೀಪ್ ಮಧುಗಿರಿ