ಮೈಸೂರು-ಮೂಡಿಗೆರೆಯ ಉದ್ಯಮಿ ಯೋಗೇಶ್ ಹೆಚ್.ಕೆ. ಜೆ.ಸಿ.ಐ ಆಲೂಮ್ನಿ ಕ್ಲಬ್ ವಲಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಮೈಸೂರು-ಮೂಡಿಗೆರೆಯ ಉದ್ಯಮಿ ಯೋಗೇಶ್ ಹೆಚ್.ಕೆ. ಜೆಸಿಐ ಆಲೂಮ್ನಿ ಕ್ಲಬ್ ವಲಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮೈಸೂರಿನ ನಾರ್ತ್ ಅವೆನ್ಯೂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ಫ್ಯಾಮಿಲಿ ಹೆಡ್ ರವಿಶಂಕರ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಯೋಗೇಶ್ ಹೆಚ್.ಕೆ. ಅವರ ಶಾಂತ ಸ್ವಭಾವ ಮತ್ತು ನಾಯಕತ್ವ ಗುಣಗಳು ವಲಯಕ್ಕೆ ಹೊಸ ದಿಕ್ಕನ್ನು ತರುತ್ತಾರೆ ಎಂಬ ನಿರೀಕ್ಷೆ ಹುಟ್ಟಿಸಿದೆ.ಯೋಗೇಶ್ ರವರು 2019ರಲ್ಲಿ ಜೆಸಿಐ ಮೂಡಿಗೆರೆಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ನೇತೃತ್ವದಲ್ಲಿ ಸಂಘವು ಹಲವು ಉಲ್ಲೇಖನೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘಟನೆಯ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸಿತ್ತು.

ಮೈಸೂರಿನ ನಾರ್ತ್ ಅವೆನ್ಯೂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ಆಲೂಮ್ನಿ ಕ್ಲಬ್ ನ್ಯಾಷನಲ್ ಚೈರ್ಮನ್ ಅನಬಘಾನ್, ನ್ಯಾಷನಲ್ ವೈಸ್ ಚೈರ್ಮನ್ ಕುಮಾರ್ ಕೆ.ಎಸ್,ಇಂಟರ್‌ನ್ಯಾಷನಲ್ ಕಮಿಷನ್ ಚೈರ್ಮನ್ ಭರತ್ ಎನ್. ಆಚಾರ್ಯ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ದೇವರಾಜ್ ಟಿ.ಎನ್., ವಲಯಾಧ್ಯಕ್ಷ-ಚುನಾಯಿತ ವಿಜಯ್ ಕುಮಾರ್, ಪೂರ್ವ ನ್ಯಾಷನಲ್ ವೈಸ್ ಚೈರ್ಮನ್ ನರೇನ್ ಕಾರಿಯಪ್ಪ ಹಾಗೂ ಆಶಾ ಜೈನ್ ಭಾಗವಹಿಸಿದ್ದರು.

ಚೈರ್ಮನ್ ರಂಗನಾಥ್ ಅವರು ನೂತನ ಅಧ್ಯಕ್ಷ ಯೋಗೇಶ್ ಹೆಚ್.ಕೆ. ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ದೇಶದ ವಿಭಿನ್ನ ಭಾಗಗಳಿಂದ ಆಗಮಿಸಿದ್ದ 500 ಕ್ಕೂ ಹೆಚ್ಚು ಆಲೂಮ್ನಿ ಕ್ಲಬ್ ಸದಸ್ಯರು ಹಾಜರಿದ್ದರು.

——–ಆಶಾ ಸಂತೋಷ್ ಅತ್ತಿಗೆರೆ

Leave a Reply

Your email address will not be published. Required fields are marked *

× How can I help you?