ಮೂಡಿಗೆರೆ:ಸಮಾಜದಲ್ಲಿ ಬಡವರ ಮತ್ತು ಅಸಾಹಯಕರ ಸೇವೆಯೇ ಸೀನಿಯರ್ ಚೇಂಬರ್ ಧ್ಯೇಯವಾಗಿದೆ. ನಮ್ಮ ಗಳಿಕೆಯ ಒಂದoಶವನ್ನು ಸಮಾಜಕ್ಕಾಗಿ ವಿನಿಯೋಗಿಸಿದಾಗ ಅದರಿಂದ ನಮಗೆ ಆತ್ಮತೃಪ್ತಿ ಸಿಗುವ ಜೊತೆಗೆ ಬದುಕು ಸಾರ್ಥಕವಾಗುತ್ತದೆ ಎಂದು ಸೀನಿಯರ್ ಚೇಂಬರ್ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್ ಹೇಳಿದರು.
ಅವರು ಇತ್ತೀಚೆಗೆ ಮೂಡಿಗೆರೆ ಜೇಸಿಭವನದಲ್ಲಿ ಸೀನಿಯರ್ ಚೇಂಬರ್ ಆಫ್ ಇಂಡಿಯಾದ ಮೂಡಿಗೆರೆ ರೀಜನ್ ವತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಬೇಟಿ ಹಾಗೂ ವಿಶೇಷಚೇತನ ವ್ಯಕ್ತಿಗಳಿಗೆ ಪರಿಕರ ವಿತರಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಅಪಾರ ಜನಸಂಖ್ಯೆ ಇರುವ ಭಾರತದಲ್ಲಿ ಎಲ್ಲ ಕೆಲಸಗಳು ಸರ್ಕಾರವೇ ಮಾಡಬೇಕೆಂದು ನಿರೀಕ್ಷಿಸುವುದು ಸರಿಯಲ್ಲ.
ಸಮಾಜದಲ್ಲಿ ಉಳ್ಳವರು ಇಲ್ಲದವರ ನೆರವಿಗೆ ಬಂದಾಗ ತನ್ನಿoದ ತಾನೇ ಸಮಾಜ ಬದಲಾವಣೆಯಾಗುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಜೇಸಿ ಸಂಸ್ಥೆ ಸೇರಿದಂತೆ ಅನೇಕ ಸಂಘ-ಸoಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸೀನಿಯರ್ ಚೇಂಬರ್ ಇಂಡಿಯಾ ಸಹ ಇಂತಹ ಅನೇಕ ಸಮಾಜಮುಖಿ ಸೇವಾಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದು ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ನೆರೆವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸೀನಿಯರ್ ಚೇಂಬರ್ ವಲಯ ಉಪಾಧ್ಯಕ್ಷೆ ಪುಷ್ಟಶೆಟ್ಟಿ ಮಾತನಾಡಿ ಮಹಿಳೆಯರು ಸಂಘಸoಸ್ಥೆಗಳ ಮೂಲಕ ತಮ್ಮನ್ನು ಹೆಚ್ಚಿನ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು.ಇಂದಿನ ಯುವಜನರು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೊಳಗಾಗಿ ಸಮಾಜದ ಅಂಕುಡೊoಕುಗಳನ್ನು ತಿದ್ದುವ ಪ್ರವೃತ್ತಿಯತ್ತ ಗಮನಹರಿಸುತ್ತಿಲ್ಲ. ಹಾಗಾಗಿ ಸಂಘಸoಸ್ಥೆಗಳು ಯುವಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡಿ ಸಮಾಜ ಸುಧಾರಣೆಗೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಐದು ಮಂದಿ ವಿಶೇಷಚೇತನರಿಗೆ ವೀಲ್ ಚೇರ್ ಸೇರಿದಂತೆ ವಿವಿಧ ಪರಿಕರಗಳನ್ನು ವಿತರಿಸಿಲಾಯಿತು. ಹಾವುಹಿಡಿಯುವ ಪ್ರವೃತ್ತಿ ನಡೆಸುವ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿರುವ ಸ್ನೇಕ್ ಆರೀಫ್ ಅವರಿಗೆ ಸೀನಿಯರ್ ಚೇಂಬರ್ಸ್ ವತಿಯಿಂದ ಹೆಚ್‌ಡಿಎಫ್‌ಸಿ ಬ್ಯಾಂಕಿನ ವಿಮೆಯನ್ನು ಉಚಿತವಾಗಿ ಮಾಡಿಸಿ ಬಾಂಡ್ ವಿತರಿಸಲಾಯಿತು.
ಕೆಜಿಎಫ್‌ನ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಮತ್ತು ಮೂಡಿಗೆರೆ ಜೆಸಿಐ ಮಾಜಿ ಅಧ್ಯಕ್ಷ ಎಂ.ಡಿ.ಜಯಪಾಲ್ ಅವರನ್ನು ಗೌರವಿಸಿಲಾಯಿತು. ಸೀನಿಯರ್ ಚೇಂಬರ್ ಇಂಡಿಯಾ ಪೂರ್ವ ವಲಯಾಧಿಕಾರಿ ಎಂ.ಆರ್.ಜಯೇಶ್, ಎನ್.ಎಲ್.ಪುಣ್ಯ ಮೂರ್ತಿ, ಬಿ.ಬಸವರಾಜ್, ಹೆಚ್.ಆರ್.ಪ್ರದೀಪ್ ಕುಮಾರ್,ಬಿ.ಎನ್.ಮನಮೋಹನ್ ಹಾಗೂ ಜೆಸಿಐ ಪದಾಧಿಕಾರಿಗಳು ಉಪಸ್ತಿತರಿದ್ದರು.
……..ವರದಿ: ವಿಜಯಕುಮಾರ್, ಮೂಡಿಗೆರೆ.