ಮಂಡ್ಯ-ಕೊತ್ತತ್ತಿ ಗ್ರಾಮದ ಖ್ಯಾತ ವಕೀಲರಾದ ಕೆ.ಬಿ.ಎಸ್.ಗಿರೀಶ್(51) ಅವರು ಸೋಮವಾರ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಒಬ್ಬ ಪುತ್ರ, ಸಹೋದರರಾದ ಪಿಇಎಸ್ ಇಂಜಿನಿಯರ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಬಿ.ಎಸ್.ಜಯಶಂಕರ್ ಬಾಬು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಕೊತ್ತತ್ತಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.