ತುಮಕೂರು-ಡಾ ಶಿವರಾಜ್ ಕುಮಾರ್ ಆರೋಗ್ಯಕ್ಕಾಗಿ ಡಾ|| ರಾಜ್ ಸೇನಾ ಸಮಿತಿ ಹಾಗೂ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ವೈದ್ಯನಾ ಥೇಶ್ವರನ ಮೊರೆ

ತುಮಕೂರು-ಸ್ಯಾಂಡಲ್‌ವುಡ್ ಸಾಮ್ರಾಟ್, ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ, ದೊಡ್ಡಮನೆಯ ಹಿರಿಯಣ್ಣ ಡಾ. ಶಿವರಾಜ್‌ಕುಮಾರ್ ಅವರಿಗೆ ಆರೋಗ್ಯದ ಸಮಸ್ಯೆ ಕಾರಣ ಹೊರದೇಶಕ್ಕೆ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಗೆ ತೆರಳಿದ್ದು, ಅವರು ಆದಷ್ಟು ಬೇಗ ಗುಣಮುಖರಾಗಲೆಂದು ತುಮಕೂರು ಜಿಲ್ಲಾ ಡಾ|| ರಾಜ್ ಸೇನಾ ಸಮಿತಿ ಹಾಗೂ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ತುಮಕೂರು ತಾಲ್ಲೂಕು ಅರೆಯೂರು ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಿವರಾಜ್, ಎಸ್ ಪರಮೇಶ್, ದರ್ಶನ್,ಕೀರ್ತಿ, ಸೋಮಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?