ತುಮಕೂರು-ನಗರದ ಎಂ.ಜಿ.ರಸ್ತೆಯಲ್ಲಿರುವ ಬಾಲ ಭವನದಲ್ಲಿ ಕ.ರ.ವೇ. (ನಾರಾಯಣ ಗೌಡರ ಬಣ) ವತಿಯಿಂದ ತುಮಕೂರು ಜಿಲ್ಲಾ ಘಟಕದ ಕಾರ್ಯಕರ್ತರ ಸಮಾವೇಶವನ್ನು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರವರ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯಾಧ್ಯಕ್ಷರು ಮಾತನಾಡುತ್ತಾ ತುಮಕೂರು ಜಿಲ್ಲೆಯಲ್ಲಿ ಈ ಸಮಾವೇಶ ಹಮ್ಮಿಕೊಂಡಿ ರುವುದು ನನಗೆ ಅತ್ಯಂತ ಖುಷಿ ತಂದಿದೆ. ಏಕೆಂದರೆ ಕಲ್ಪತರು ನಾಡು ತುಮಕೂರು ಜಿಲ್ಲೆಯ ನಮ್ಮ ಕಾರ್ಯಕರ್ತರು ಅತ್ಯಂತ ಶಿಸ್ತುಬದ್ಧವಾಗಿ ಗಡಿಯಲ್ಲಿ ಸೈನಿಕರು ನಮ್ಮ ದೇಶವನ್ನು ಯಾವ ರೀತಿ ಶಿಸ್ತು ಬದ್ಧವಾಗಿ ಕಾಪಾಡಿಕೊಂಡು ಬರುತ್ತಿದ್ದಾರೋ ಅವರ ಆದರ್ಶಗಳಿಂದ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಖುಷಿ ತಂದಿರುವ ವಿಚಾರ, ಏಕೆಂದರೆ ಸೈನಿಕರಲ್ಲಿರುವ ಬದ್ಧತೆ, ನಿಷ್ಠೆ, ಶಿಸ್ತು ಇಂದು ನಮ್ಮ ಕಾರ್ಯಕರ್ತರಲ್ಲಿ ನಾನು ಕಾಣುತ್ತಿದ್ದೇನೆ. ಸೈನಿಕರು ರಾಷ್ಟ್ರದ ಉಳಿವಿಗಾಗಿ ಹೇಗೆ ಪ್ರತಿನಿತ್ಯ ದುಡಿಯುತ್ತಿದ್ದಾರೋ, ಅದೇ ರೀತಿ ನಮ್ಮ ಕಾರ್ಯಕರ್ತರು ರಾಜ್ಯದ ಪ್ರಗತಿ, ರಾಜ್ಯದ ರಕ್ಷಣೆ, ಕನ್ನಡದ ಭಾಷೆ, ನೆಲ, ಗಡಿ, ಬದುಕು, ಕೆಲಸದ, ಜಲದ ಬಗ್ಗೆ ಶಿಸ್ತಿನಿಂದ ಅನೇಕ ಸಮಸ್ಯೆಗಳ ಬಗ್ಗೆ ನಿಸ್ವಾರ್ಥ ಹೋರಾಟವನ್ನು ಮಾಡುತ್ತಾ ತಾಯ್ನಾಡಿನ ಸೇವೆ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಮುoದುವರೆದು ಮಾತನಾಡುತ್ತಾ ಜಿಲ್ಲಾಧ್ಯಕ್ಷರಾದ ಪಿ.ಆರ್.ರಂಗಸ್ವಾಮಿ ನೇತೃತ್ವದಲ್ಲಿ ಇಂದು ಜಿಲ್ಲಾ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡು, ಜಿಲ್ಲೆಯಲ್ಲಿ ಕಾರ್ಯಕರ್ತರನ್ನು ಸಂಘಟಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.ಪ್ರತಿಯೊಬ್ಬ ಕನ್ನಡಿಗರಿಗೂ ಸಹ ನಮ್ಮ ನೆಲ, ಜಲ, ಭಾಷೆ, ಗಡಿ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯ ನಮ್ಮ ಸಂಘಟನೆಯಿoದ ಆಗುತ್ತಿದೆ. ಅದಕ್ಕೆ ನಾನು ಸದಾ ನಿಮ್ಮಗಳಿಗೆ ಚರಿಋಣಿಯಾಗಿರುತ್ತೇನೆಂದು ತಿಳಿಸಿದರು.ಇದೇ ರೀತಿಯಲ್ಲಿ ನಿಮ್ಮಗಳ ನಿಸ್ವಾರ್ಥ ಸೇವಾ ಮನೋಭಾವ ಮುಂದುವರೆಯುತ್ತಿರಲಿ ಜೊತೆಗೆ ನಮ್ಮ ಸಂಘಟನೆಯ ಸದಸ್ಯತ್ವವನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದರ ಮೂಲಕ ಕ.ರ.ವೇ. ಮತ್ತಷ್ಟು ಬಲ ನಿಮ್ಮಿಂದ ತುಂಬಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಭಾಗವಾಗಿ ಇತ್ತೀಚೆಗೆ ಮರಣ ಹೊಂದಿದ ಕ.ರ.ವೇ. ಕಾರ್ಯಕರ್ತರುಗಳಾದ ಮಹದೇವ್ (ಬೆಂಕಿ) ಮತ್ತು ಕುಮಾರ್ ಯಾದವ್ ಅವರ ಕುಟುಂಬದವರಿಗೆ ಟಿ.ಎ.ನಾರಾಯಣ ಗೌಡರ ಸಮ್ಮುಖದಲ್ಲಿ ಆರ್ಥಿಕ ನೆರವನ್ನು ನೀಡುವುದರ ಮೂಲಕ ಕಾರ್ಯಕರ್ತರ ಕುಟುಂಬಕ್ಕೆ ಧೈರ್ಯ ಮತ್ತು ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂಬ ಸoದೇಶವನ್ನು ಸಹ ನೀಡಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಧ್ಯಕ್ಷರಾದ ಪಿ.ಆರ್.ರಂಗಸ್ವಾಮಿ, ರಾಜ್ಯಪ್ರಧಾನ ಕಾರ್ಯದರ್ಶಿ ಸಣ್ಣಿರಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಧರ್ಮರಾಜ್ ಗೌಡ, ಪ್ರಧಾನ ಕಾರ್ಯದರ್ಶಿ ಮನು, ಉಪಾಧ್ಯಕ್ಷರಾದ ಯೋಗೀಶ್ ಗೌಡ,ಅಬ್ಬಾಸ್, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ತುಮಕೂರು ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.