ತುಮಕೂರು-255 ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ-ಜನವರಿ 2 ಕೊನೆಯ ದಿನಾಂಕ

ತುಮಕೂರು-ಜಿಲ್ಲಾ ಗೃಹ ರಕ್ಷಕದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ 255ಸ್ವಯಂ ಸೇವಾ ಗೃಹರಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಜಿಲ್ಲಾ ಗೃಹರಕ್ಷಕದಳದ ಕಚೇರಿಯಿಂದ ಡಿಸೆಂಬರ್ 27ರೊಳಗಾಗಿ ನಿಗಧಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯನ್ನು 2025ರ ಜನವರಿ 2ರೊಳಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿಗೆ ಖುದ್ದಾಗಿ ಸಲ್ಲಿಸಬಹುದಾಗಿದೆ.

ಗೃಹರಕ್ಷಕ ಹುದ್ದೆಯು ಖಾಯಂ ನೌಕರಿಯಾಗಿರುವುದಿಲ್ಲ.ಯಾವುದೇ ರೀತಿಯ ಮಾಸಿಕ ಸಂಬಳ ಹಾಗೂ ವಿಶೇಷ ಭತ್ಯೆಗಳನ್ನು ನೀಡಲು ಅವಕಾಶವಿರುವುದಿಲ್ಲ. ತುರ್ತು ಸಂದರ್ಭದಲ್ಲಿ ಕರ್ತವ್ಯ ಮತ್ತು ಚುನಾವಣೆ ಕರ್ತವ್ಯ ನಿರ್ವಹಿಸಿದ ದಿನದಂದು ಗೌರವ ಧನ ಸೌಲಭ್ಯವನ್ನು ನೀಡಲಾಗುವುದು.ಗೌರವಧನವನ್ನು ಬ್ಯಾಂಕ್ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಪ್ರತಿ ಮಾಹೆಯಲ್ಲಿ ೪ ಕವಾಯತುಗಳು, ವಾರದಲ್ಲಿ ಒಂದು ದಿನದಂತೆ ನಡೆಸಲಾಗುವುದು. ಅಭ್ಯರ್ಥಿಗಳು 19 ರಿಂದ 40 ವರ್ಷದೊಳಗಿನವರಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ 10ನೇ ತರಗತಿ ಅಂಕಪಟ್ಟಿ, ಜನ್ಮ ದಿನಾಂಕ ದೃಢೀಕರಣ (ಟಿ.ಸಿ.), ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್, ವೋಟರ್ ಐ.ಡಿ, ರೇಷನ್ ಕಾರ್ಡ್, 2 ಪಾಸ್‌ಪೋರ್ಟ್ ಅಳತೆಯಭಾವಚಿತ್ರ, ದೈಹಿಕ ಸದೃಢತಾ ಪ್ರಮಾಣ ಪತ್ರ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿ ಅಥವಾ ದೂರವಾಣಿ ಸಂಖ್ಯೆ: 0816-2009116ನ್ನು ಸಂಪರ್ಕಿಸಬಹುದಾಗಿದೆ ಎಂದು ಗೃಹರಕ್ಷಕದಳದ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?