ಹೊಳೆನರಸೀಪುರ:ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿದ್ದ ಮಾಪಣ್ಣ ಹದನೂರು ಅವರಿಗೆ ತಾಲ್ಲೂಕು ಮಾಡಿದ ದಂಡೋರ ಸಮಿತಿ ಸಭೆ ಸೇರಿ ಶ್ರದ್ಧಾಂಜಲಿ ಅರ್ಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಂಡೋರ ತಾಲ್ಲೂಕು ಸಮಿತಿ ಆಯೋಜಿಸಿದ್ದ ಮಾಪಣ್ಣಹದನೂರು ಅವರ ಶ್ರದ್ದಾಂಜಲಿ ಸಭೆಯಲ್ಲಿ ಹಾಸನ ಜಿಲ್ಲಾ ದಂಡೋರ ಸಮಿತಿ ಅಧ್ಯಕ್ಷ ಟಿ.ಆರ್. ಮಂಜುನಾಥ್ ಮಾತನಾಡಿ, ಮಾಪಣ್ಣರವರು 1998ರಲ್ಲಿ ಉದ್ಯಮದಿಂದ ಸ್ಥಿತಿವಂತರಾಗಿದ್ದರು. ಆದರೂ ಸಾಮಾಜಿಕ ನ್ಯಾಯದ ವರ್ಗೀಕರಣದ ಸಿದ್ದಾಂತ ಗೌರವಿಸಿ ಮಾದಿಗ ಜನಾಂಗದ ಅಭಿವೃದ್ದಿಗಾಗಿ ಚಳುವಳಿಯಲ್ಲಿ ಸಕ್ರಿಯರಾಗಿದ್ದು ಒಳಮೀಸಲಾತಿ ವರ್ಗೀಕರಣದ ಸುಪ್ರೀಂ ತೀರ್ಪ ಬಂದರೂ ರಾಜ್ಯ ಸರಕಾರ ಜಾರಿಗೊಳಿಸದಿರುವ ಕ್ರಮವನ್ನು ಕಟುವಾಗಿ ವಿರೋದಿಸಿದ್ದರು ಎಂದರು.
ತಾಲ್ಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ ಸಿ.ಆರ್. ಮಂಜುನಾಥ್ ಮಾತನಾಡಿ, ನಾವೆಲ್ಲರೂ ಸಂಘಟನೆಯ ಆರಂಭದ ದಿನಗಳಲ್ಲಿ ಮಾಪಣ್ಣ ರವರು ನಮಗೆಲ್ಲಾ ಮಾರ್ಗದರ್ಶನ ನೀಡಿ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಆಗಿದ್ದರು. ಅವರ ನಿಧನ ನಮ್ಮಗೆಲ್ಲಾ ಭರಸಲಾಗದ ನಷ್ಟ ಉಂಟುಮಾಡಿದೆ ಎಂದರು.
ದಂಡೋರ ಸಮಿತಿ ರಾಜ್ಯ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ ಮಾಪಣ್ಣ ಹದನೂರು ಆರಂಭದಿಂದ ಹೋರಾಟಗಾರರಾಗಿಯೇ ಉಳಿದಿದ್ದರು, ವೈಯುಕ್ತಿಕ ಹಿತಾಸಕ್ತಿಗಾಗಿ ಯಾವುದೇ ಪಕ್ಷಕ್ಕೂ ಹೋಗಲಿಲ್ಲ ಅವರ ಸಾಮರ್ಥ್ಯ ವರ್ಚಸ್ಸಿಗೆ ರಾಜಕೀಯ ಸ್ಥಾನಮಾನ ಸುಲಭವಾಗಿತ್ತು ಆದರೆ ಅವರು ಅಧಿಕಾರಕ್ಕಾಗಿ, ಸ್ವಾಭಿಮಾನ ಬಿಡದೆ ಹೋರಾಡಿದರು ಎಂದು ನೆನೆದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಅಧ್ಯಕ್ಷ ಕೆ.ಎಂ.ನಾಗರಾಜು,ಮಾಪಣ್ಣರವರು ಚಳುವಳಿಯ ವಿಚಾರದದಲ್ಲಿ, ಸಿದ್ಧಾಂತದಲ್ಲಿ ರಾಜಿಯಾದವರಲ್ಲ. ಕಲ್ಬುರ್ಗಿಯವರಾದರೂ ಚಳುವಳಿಯಲ್ಲಿ ಭಾಗವಹಿಸಲು ಕರೆದಾಗಲೆಲ್ಲಾ ಬೆಂಗಳೂರಿಗೆ ಬಂದು ನಮಗೆಲ್ಲಾ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.
ರಾಜ್ಯ ಸಮಿತಿಯ ಸುರೇಶ್, ಮುಖಂಡರಾದ ಹೊನ್ನೇನಹಳ್ಳಿ ರಂಗಸ್ವಾಮಿ ಮಾತನಾಡಿದರು. ಮಾಪಣ್ಣ ಹದನೂರ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಶ್ರದ್ದಾಂಜಲಿ ಅರ್ಪಿಸಿದರು. ದ.ಸಂ.ಸಮಿತಿ ತಾಲ್ಲೂಕು ಅಧ್ಯಕ್ಷರಾದ ಚಿನ್ನಸ್ವಾಮಿ, ದಂಡೋರ ಸಮಿತಿಯ ಪದಾಧಿಕಾರಿಗಳಾದ ಕಡವಿನಹೊಸಹಳ್ಳಿ ಸತೀಶ, ಪ್ರವೀಣ, ಶಶಿ, ರಾಘು, ಮಂಜು, ವೀರಭದ್ರಯ್ಯ, ರಂಗೇನಹಳ್ಳಿ ರಾಜಣ್ಣ, ಕೆರೆಗೋಡು ಸೋಮಣ್ಣ, ಗಾಂಧಿನಗರದ ರವಿಕುಮಾರ್, ಮಹೇಶ, ಕಡವಿನಕೋಟೆ ಚಂದ್ರು, ಶಶಿ, ಗಿರೀಶ, ಆನೆಕನ್ನಂಬಾಡಿ ಪುಟ್ಟು, ಕಾಳೇನಹಳ್ಳಿ ಕಾವಲಿನ ಅಶೋಕ, ಸುನಿಲ್, ದೊರೆ,ಕಾಳಯ್ಯ ಮುಂತಾದವರು ಭಾಗವಹಿಸಿದ್ದರು.
———-ಸುಕುಮಾರ್