ತುಮಕೂರು-ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಾಯಿಬಾಬಾ ದೇವಸ್ಥಾನದ ಸಭಾಂಗಣದಲ್ಲಿ ನವದೆಹಲಿಯ ಸಾಂಸ್ಕೃತಿಕ ಸಚಿವಾಲಯದ ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ನೀಲಾಲಯ ನೃತ್ಯ ಕೇಂದ್ರದ ಕಲಾವಿದರಿಂದ ನವದುರ್ಗ ವೈಭವಂ ಭರತನಾಟ್ಯ ರೂಪಕವನ್ನು ಡಿ. 26 ರಂದು ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರಾದ ಜಿ.ಎಸ್. ಬಸವರಾಜು, ದೇವಸ್ಥಾನದ ಕಾರ್ಯದರ್ಶಿ ಕೆ.ಎಸ್. ಗುರುಸಿದ್ದಪ್ಪ, ಕೈಗಾರಿಕೋದ್ಯಮಿ ಹಾಗೂ ಸಂಸ್ಕೃತ ವಿದ್ವಾಂಸರಾದ ಜಿ.ವಿ. ಕೇತಾರಿನಾಥನ್ ಭಾಗವಹಿಸಲಿದ್ದಾರೆ ಎಂದು ನೀಲಾಲಯ ನೃತ್ಯ ಕೇಂದ್ರದ ಬಾಲವಿಶ್ವನಾಥ್ ತಿಳಿಸಿದ್ದಾರೆ.