ಅರಕಲಗೂಡು-ಯುವ ಬ್ರಿಗೇಡ್ ವತಿಯಿಂದ ಕಾವೇರಿ ನಮನ ಹೆಸರಿನಲ್ಲಿ ನದಿ ಸ್ವಚ್ಚತೆ ಹಾಗೂ ನದಿ ಜಾಗೃತಿ ಅಭಿಯಾನ ನಡೆಯುತ್ತಿದ್ದು ಹಾಸನ ಜಿಲ್ಲೆಯ ರಾಮನಾಥಪುರಕ್ಕೆ ಡಿಸೆಂಬರ್ 28 ರಂದು ಶನಿವಾರ 12 ಗಂಟೆಗೆ ಯುವ ಬ್ರಿಗೇಡ್ ಮಾರ್ಗದಶಕರಾದ ಚಕ್ರವರ್ತಿ ಸೂಲಿಬೆಲೆ ಅಗಮಿಸಲಿದ್ದಾರೆ ಎಂದು ಕಾವೇರಿ ನದಿ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ನಡೆಯುವ ಸ್ವಚ್ಚತಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳು, ಗ್ರಾಮಸ್ಥರು ಆಗಮಿಸಿ ಸ್ವಚ್ಚತೆ ಹಾಗೂ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಾಸನ ಜಿಲ್ಲೆಯ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯ ಪದಾಧಿಕಾರಿಗಳಾದ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ಸಂಘಟನಾ ಕಾರ್ಯದರ್ಶಿ ಶಿವಪ್ಪ,ತಾಲೂಕು ಅಧ್ಯಕ್ಷರು ಸಿದ್ದರಾಜು, ಖಜಾಂಚಿ ಕೇಶವ ಮುಂತಾದವರು ಮನವಿ ಮಾಡಿದ್ದಾರೆ.
—–ಶಶಿಕುಮಾರ್ ಕೆಲ್ಲೂರು