ಕೆ.ಆರ್.ಪೇಟೆ-ಪೋಷಕರು ತಮ್ಮ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು.ಆಗ ಮಾತ್ರ ಮಕ್ಕಳು ಶ್ರೇಷ್ಠ ವಿದ್ಯಾರ್ಥಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಶಿಕ್ಷಕರ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘ, ಕೆ.ಆರ್.ಪೇಟೆ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಅಭಿನಂದಿಸಿ ಆಶೀರ್ವಚನ ನೀಡಿದರು.
ಶಿಕ್ಷಣವು ಮಾನವೀಯ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತದೆ. ಮಾನವೀಯ ಮೌಲ್ಯಗಳು, ನಂಬಿಕೆಗಳು, ವರ್ತನೆಗಳು, ಮತ್ತು ನಡಾವಳಿಕೆಗಳು ವಿದ್ಯಾರ್ಥಿಯನ್ನು ಉತ್ತಮ ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ.ನಾಲ್ಕು ಕೊಠಡಿಯಲ್ಲಿ ಅಂಕ ಗಳಿಸುವ ಕೆಲಸವಾಗಬಾರದು. ಉತ್ತಮ ಗುಣಗಳನ್ನು ಕಲಿಸುವ ಕೆಲಸವಾಗಬೇಕು. ಮಕ್ಕಳಿಗೆ ಹಿರಿಯರಿಗೆ ಹೇಗೆ ಗೌರವ ಕೊಡಬೇಕು. ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಶಾಲಾ ಹಂತದಲ್ಲಿಯೇ ಕಲಿಸಿಕೊಡಬೇಕು. ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಕೇವಲ ಶಿಕ್ಷಕರೊಬ್ಬರೇ ತೆಗೆದುಕೊಳ್ಳು ವುದರಿಂದ ಮಕ್ಕಳ ಗುಣಮಟ್ಟದ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಪೋಷಕರೂ ಸಹ ತಮ್ಮ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಂಡರೆ ಆ ಮಕ್ಕಳು ಉತ್ತಮ ವಿದ್ಯಾರ್ಥಿಯಾಗಿ ರೂಪುಗೊಳ್ಳುತ್ತಾನೆ. ಹಾಗಾಗಿ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಶಿಕ್ಷಕರ ಜೊತೆಗೆ ಪೋಷಕರು ಸಹ ತೆಗೆದುಕೊಳ್ಳಬೇಕು ಎಂದು ತೆಂಡೇಕೆರೆ ಶ್ರೀಗಳು ಪೋಷಕರಿಗೆ ಸಲಹೆ ನೀಡಿದರು.
ಸಮಾರಂಭವನ್ನು ಶಾಸಕ ಹೆಚ್.ಟಿ.ಮಂಜು ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವೀರಶೈವ ಲಿಂಗಾಯಿತ ಬಂಧುಗಳು ಸಂಘಟಿತರಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಕೆ.ಆರ್.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಂ.ಎಸ್.ಮಹಾದೇವಪ್ಪ ವಹಿಸಿದ್ದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳಾದ ಶಿ.ಕುಮಾರಸ್ವಾಮಿ ಅವರು ಕಾರ್ಯಕ್ರಮವನ್ನು ಕುರಿತು ಪ್ರಧಾನ ಭಾಷಣ ಮಾಡಿದರು. ಸಾಹಿತಿ ಮಾರೇನಹಳ್ಳಿ ಲೋಕೇಶ್ ಅತಿಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಿದರು. ಕಾಪನಹಳ್ಳಿ ಗವೀಮಠ ಕ್ಷೇತ್ರದ ಶ್ರೀಗಳಾದ ಸ್ವತಂತ್ರ ಶ್ರೀ ಚನ್ನವೀರಯ್ಯ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಉದ್ಯಮಿ ಬೂಕಹಳ್ಳಿ ಮಂಜು ಮತ್ತು ನೌಕಾಪಡೆಯ ಲೆಫ್ಟ್ನೆಂಟ್ ಅಧಿಕಾರಿ ಬಿ.ಎಂ.ಸಾಗರ್ ಅವರನ್ನು ಸನ್ಮಾನಿಸಿ ಅವರ ದೇಶ ಸೇವಾ ಗುಣವನ್ನು ಶ್ಲಾಘಿಸಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪ್ರೇಮ ಇಂಡಸ್ಟ್ರೀಸ್ ಮಾಲೀಕರು ಬಿ.ಸಿ.ಮಂಜು, ನೌಕಾಪಡೆಯ ಲೆಫ್ಟ್ನೆಂಟ್ ಅಧಿಕಾರಿ ಬಿ.ಎಂ.ಸಾಗರ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸುಜೇಂದ್ರಕುಮಾರ್, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಎಂ.ಬಸವರಾಜು, ತಾಲ್ಲೂಕು ಬಡ್ತಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್.ಸುರೇಶ್, ಶ್ರೀ ಗುರು ಚನ್ನಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬ್ಯಾಂಕ್ ಪರಮೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾದ ಸಾಸಲು ಈರಪ್ಪ, ತೋಟಪ್ಪಶೆಟ್ಟಿ, ಕೆ.ಎಸ್.ನಾಗೇಶ್‌ಬಾಬು, ಸರ್ಕಾರಿ ಇಂಜಿನಿಯರಿoಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಡಿ.ಬಿ.ಸತ್ಯ, ಶಿಕ್ಷಣ ಸಂಯೋಜಕ ನವೀನ್‌ಕುಮಾರ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಎಸ್.ಮೋಹನ್‌ಕುಮಾರಿ, ಸಾಹಿತಿ ಮಾರೇನಹಳ್ಳಿ ಲೋಕೇಶ್, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ಕೆ.ಆರ್.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮಹಾದೇವಪ್ಪ, ಗೌರವಾಧ್ಯಕ್ಷ ಎಸ್.ಇ.ಚನ್ನರಾಜು, ಕಾರ್ಯದರ್ಶಿ ಪ್ರಭುಸ್ವಾಮಿ, ಖಜಾಂಚಿ ಎಸ್.ಎಂ.ಶಿವಕುಮಾರ್, ಉಪಾಧ್ಯಕ್ಷರಾದ ಕೆ.ಬಿ.ಬಂಗಾರು, ವಿ.ಜಿ.ಮಲ್ಲಿಕಾರ್ಜುನಸ್ವಾಮಿ, ಎಂ.ಕೆ.ಲೋಕೇಶ್, ಸಂಚಾಲಕರ ಎನ್.ಎನ್.ನಾಗೇಶ್, ಸಹ ಕಾರ್ಯದರ್ಶಿಗಳಾದ ಬಿ.ಎನ್.ದೀಪಾ, ಡಿ.ಎಸ್.ಮಹಾದೇವಸ್ವಾಮಿ, ಕೆ.ಕೆ.ಮಹೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಕಾತ್ಯಾಯಿನಿ, ಪಿ.ಎಸ್.ಮಂಜಪ್ಪ, ಎ.ಪಿ.ಅಣ್ಣಾಜಪ್ಪ, ಡಿ.ಸಿ.ರೇವಣ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಡಿ.ಎಸ್.ಮಹೇಶ್, ಆರ್.ಜೆ.ನಾಗೇಶ್, ಎಸ್.ಎಂ.ಭರತ್, ಜಿಲ್ಲಾ ಸಂಘದ ನಿರ್ದೇಶಕ ಡಿ.ಎಸ್.ಗಿರೀಶ್, ಎಸ್.ಸಿ.ಬಸವರಾಜು, ದಿನೇಶ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಉಪಾಧ್ಯಕ್ಷ ವಿ.ಜೆ.ಜಗದಾಂಭ, ಎಂ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಅಪ್ಪಾಜಿ, ಆಶಾರಾಣಿ, ಖಜಾಂಚಿ ಎಲ್.ಪಿ.ವಸಂತಪ್ಪ, ಕಾರ್ಯದರ್ಶಿ ರಾಣಿ ಜಗದೀಶ್, ನಂಜಪ್ಪ, ನಿರ್ದೇಶಕರಾದ ಪೂರ್ಣಿಮಾ ಸಂಜಯ್, ಮಡುವಿನಕೋಡಿ ಗಂಗಾಧರ್, ಉಮಾ, ನಾಗರಾಜು, ಉಷಾ, ಆಶಾ, ಶಿವಪ್ಪ, ಮಂಜುಳಾ ಮಹಾದೇವಪ್ಪ, ಮೀನಾಕ್ಷಿ ಚಂದ್ರಶೇಖರ್, ರಾಜಶೇಖರಪ್ಪ, ಶಿವಪ್ಪ, ಜಿಲ್ಲಾ ನಿರ್ದೇಶಕರಾದ ನಯನಪ್ರಸಾದ್, ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು.
ಕೆ.ಎಸ್.ಸುಪ್ರಿಯ ಮತ್ತು ಸ್ಮಿತಾ.ಡಿ. ಅವರು ಭರತ ನಾಟ್ಯ ಪ್ರದರ್ಶನ ಮಾಡಿದರು. ಶಿವಾನಿ ಪ್ರಸಾದ್, ನಿಸರ್ಗ.ಡಿ.ಸಿ ಅವರು ವಚನ ಗಾಯನ ಮಾಡಿದರು. ಉಷಾ ಮತ್ತು ತಂಡದವರು ಪ್ರಾಥಿಸಿದರು. ಎಸ್.ಎಂ.ಶಿವಕುಮಾರ್ ಸ್ವಾಗತಿಸಿದರು. ಎಸ್.ಇ.ಚನ್ನರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿ.ಜಿ.ಮಲ್ಲಿಕಾರ್ಜುನಸ್ವಾಮಿ ನಿರೂಪಿಸಿದರು. ಕೆ.ಎಸ್.ನಾಗೇಶ್‌ಬಾಬು ವಂದಿಸಿದರು.
———ಶ್ರೀನಿವಾಸ್ ಆರ್