ಚಿಕ್ಕಮಗಳೂರು-ಕ್ರಿಸ್‌ಮಸ್ ಸಂಭ್ರಮ-ಚರ್ಚ್ ಗುರುಗಳಿಗೆ ಹೂಗುಚ್ಚ ನೀಡಿ ಬಿಜೆಪಿ ಶುಭಾಶಯ ಸಲ್ಲಿಕೆ

ಚಿಕ್ಕಮಗಳೂರು-ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಜಿಲ್ಲಾ ಬಿಜೆಪಿ ಮುಖಂಡರುಗಳು ನಗರದ ಎಐಟಿ ವೃತ್ತ ಸಮೀಪದ ಬ್ರಿಷಪ್ ಡಾ.ಟಿ.ಅಂತೋಣಿಸ್ವಾಮಿ ಹಾಗೂ ನಗರದ ಸಂತ ಜೋಸೆಫರ ಪ್ರಧಾನ ದೇವಾಲಯದ ಅಂತೋಣಿ ಪಿಂಟೋ ಸ್ವಗೃಹಕ್ಕೆ ಬುಧವಾರ ತೆರಳಿ ಗುರುಗಳಿಗೆ ಪುಷ್ಪಗುಚ್ಚ ವಿತರಿಸುವ ಮೂಲಕ ಶುಭಾಶಯ ಕೋರಿದರು.

ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಕ್ರಿಸ್‌ಮಸ್ ದಿನವು ಅತ್ಯಂತ ಶ್ರದ್ಧೆಯಿಂದ ಸಮುದಾಯದ ಜನತೆ ಆಚರಿಸುವಂತಾಗಬೇಕು. ಪ್ರತಿಯೊಬ್ಬರು ಕ್ರಿಸ್‌ಮಸ್‌ನ ಉತ್ತಮ ಸಂದೇಶಗಳನ್ನು ತುಂಬಿಕೊoಡು ಸನ್ನಡತೆಯ ದಾರಿಯಲ್ಲಿ ಸಾಗಿ ಅಭಿವೃದ್ದಿ ಹೊಂದಬೇಕು ಎಂದು ಶುಭ ಕೋರಿದರು.

ಬ್ರಿಟಿಷ್ ಡಾ.ಟಿ.ಅಂತೋಣಿ ಮಾತನಾಡಿ ಶಾಂತಿ, ಸೌಹಾರ್ದತೆ ಸಾರುವ ಕ್ರಿಸ್‌ಮಸ್ ಹಬ್ಬವು ಸರ್ವ ಜನತೆಗೆ ಒಳಿತು ಮಾಡುವಂತಾಗಲೀ. ಮನುಷ್ಯನ ಮನಸ್ಸು ಕಲ್ಮಶದಿಂದ ದೂರವಾಗಿ, ಸದ್ಗುಣಗಳನ್ನು ಮೈ ಗೂಡಿಸಿಕೊಂಡು ಎಲ್ಲರಲ್ಲೂ ಪರಸ್ಪರ ಬಾಂಧವ್ಯ ಮೂಡಿಸಲಿ ಎಂದು ಆಶಿಸಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಇದ್ದರು.

—-ಸುರೇಶ್

Leave a Reply

Your email address will not be published. Required fields are marked *

× How can I help you?