ಮೈಸೂರು-ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ-ಸಾಧಕರಿಗೆ ಸನ್ಮಾನ

ಮೈಸೂರು-ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 30ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆಯಿತು.

2024ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೊಸೈಟಿಯ ಸದಸ್ಯರುಗಳಾದ ಶ್ರೀಕಾಂತ್ ಕಶ್ಯಪ್, ರಂಗನಾಥ್, ಮಹಾಲಿಂಗ, ಜಾನಕಿ ರಾಮ್ ಹಾಗೂ ಕನ್ನಡ ಡಿಂಡಿಮ ಪ್ರಶಸ್ತಿ ಪಡೆದ ವಿಕ್ರಂ ಅಯ್ಯಂಗಾರ್ ರವರನ್ನು ಈ ಸಂದರ್ಭದಲ್ಲಿ ಅಭಿನಂ ದಿಸಲಾಯಿತು.

ಮೈಸೂರು ಮಹಲಿಂಗು ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ವಿದ್ವಾನ್ ಸುಮಂತ್ ತಂಡದಿಂದ ವೇದಘೋಷ ನಡೆಯಿತು.

ಸದ್ಯಸರಿಗೆ ಹಾಗೂ ಅವರ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

2025 ನೇ ಇಸವಿಯ ದಿನದರ್ಶಿನಿಯನ್ನು ಬಿಡುಗಡೆಗೊಳಿಸಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಎಚ್. ವಿ ರಾಜೀವ್ ಮಾತನಾಡಿದರು.

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಎಂ ಡಿ ಗೋಪಿನಾಥ್,ಉಪಾಧ್ಯಕ್ಷರಾದ ಎಂ ಎನ್ ಸೌಮ್ಯ ಹಾಗೂ ಖಜಾಂಚಿ ಕೆ ನಾಗರಾಜ ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ಹಿರಿಯ ಪ್ರವರ್ತಕರಾದ ಪ್ರಭಾಕರ್, ಎಚ್ ಎಸ್ ಶೇಷಗಿರಿ,ನಿರ್ದೇಶಕ ಮಂಡಲಿ ಸದಸ್ಯರಾದ ಸಹಕಾರ ರತ್ನ ಸಿ ವಿ ಪಾರ್ಥಸಾರಥಿ, ಪ್ರಶಾಂತ್ ತಾತಾಚಾರ್ ಹೆಚ್ ಎಸ್ ,ಬಾಲಕೃಷ್ಣ ಎಂ ಆರ್,ಚೇತನ್, ಹೆಚ್ ಪಿ, ಪಣಿರಾಜ್ ಎನ್, ವಿಕ್ರಂ ಅಯ್ಯಂಗಾರ್,ಮಹಿಮ ಪಿ, ನಾಗಶ್ರೀ. ಎನ್ ,ಕೆ ಎನ್ ಅರುಣ್, ಶಿವರುದ್ರಪ್ಪ, ಶಾಶ್ವತಿ ನಾಯಕ ಎಂ ಪಿ ಹಾಗೂ ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

—————ಮಧುಕುಮಾರ್

Leave a Reply

Your email address will not be published. Required fields are marked *

× How can I help you?