ಮೈಸೂರು-ಡಿ.29 ರಂದು 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 2024-ಚಿತ್ರಸಂತೆ-ಪೋಸ್ಟರ್ ಬಿಡುಗಡೆಗೊಳಿಸಿದ ನಟ ಡಾಲಿ ಧನಂಜಯ್

ಮೈಸೂರು-ಡಿಸೆಂಬರ್ 29 ರಂದು ನಗರದ ಜೆ.ಕೆ ಮೈದಾನದಲ್ಲಿ ನಡೆಯಲಿರುವ 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 2024 ಮತ್ತು ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಚಿತ್ರಸಂತೆಯ ಪ್ರಚಾರದ ಪೋಸ್ಟರ್ ಅನ್ನು ನಾಯಕ ನಟ ಡಾಲಿ ಧನಂಜಯ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರ ಸಂತೆ ನಡೆಯುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಡಾಲಿ ಧನಂಜಯ್ ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಮೈಸೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಆಯೋಜಕರಾದ ರಂಜಿತಾ ಸುಬ್ರಮಣ್ಯ ಮಾತನಾಡಿ,ಕಳೆದ 4 ವರ್ಷದಿಂದ ಮೈಸೂರು ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವ ಮತ್ತು ಪ್ರಥಮ ಬಾರಿಗೆ ಸಿನಿ ಸಂತೆ ಫಿಲ್ಮ್ ಕಾರ್ನಿವಲ್ ಆಯೋಜಿಸಲಾಗುತ್ತಿದ್ದು,ಚಿತ್ರ ನಿರ್ಮಾಪಕರಿಗೆ ಹಾಗು ನಟ-ನಟಿಯರಿಗೆ ಪ್ರೇಕ್ಷಕರೊಂದಿಗೆ ನೇರವಾಗಿ ಬೆರೆಯುವ ಅವಕಾಶವನ್ನು ದೊರಕಿಸಿಕೊಡಲಾಗುತ್ತಿದೆ ಎಂದರು.

ಈ ವರ್ಷ ವಿಶೇಷವಾಗಿ ಸಾರ್ವಜನಿಕರಿಗೆ ಗಾಯನ ಸ್ಪರ್ಧೆ,ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನ ಆಯೋಜಿಸುತ್ತಿದ್ದು ಪ್ರತಿ ವಿಭಾಗದ ಮೂರು ಸ್ಪರ್ಧೆಯ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಸಿನಿ ಸಂತೆಯಲ್ಲಿ ವಿವಿಧ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರಿಯಲು ಅವಕಾಶವಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 6360959871/6364632425 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಸಂಪರ್ಕಾಧಿಕಾರಿ ಶಂಕರ್ ಎಸ್‌.ಎನ್, ಉದ್ಯಮಿ ಗಗನ್ ದೀಪ್ ಸೇರಿದಂತೆ 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 2024ರ ಆಯೋಜಕರಾದ ರಂಜಿತಾ ಸುಬ್ರಹ್ಮಣ್ಯ, ಸಿನಿ ಸಂತೆ ನಿರ್ದೇಶಕಿ ಮತ್ತು ಸಂಸ್ಥಾಪಕಿ ಸಂಧ್ಯಾ ರಾಣಿ, ಐಶ್ವರ್ಯ ಜಿ ಪ್ರಸಾದ್, ಹರ್ಷ, ರೂಪ ಹಾಗೂ ಇನ್ನಿತರರು ಹಾಜರಿದ್ದರು.

——–ಮಧುಕುಮಾರ್

Leave a Reply

Your email address will not be published. Required fields are marked *

× How can I help you?