ತುಮಕೂರು-ನಗರದ ಬೆಳಗುಂಬದಲ್ಲಿರುವ ಜಗದ್ಗುರು ಶ್ರೀ ಸಿದ್ಧರಾಮೇಶ್ವರರ 73ನೇ ಗದ್ದಿಗೆ ಇರುವ ಸುಕ್ಷೇತ್ರದಲ್ಲಿ ಕಳೆದ ನವೆಂಬರ್‌ನಲ್ಲಿ ದೇವಸ್ಥಾನವು ಉದ್ಘಾಟನೆಯಾಗಿರುವ ಪ್ರಯುಕ್ತ ದಿನಾಂಕ 28ರ ಶನಿವಾರ ಒಂದು ಮಂಡಲ ಅ0ದರೆ 48ದಿನಗಳ ಮಂಡಲ ಪೂಜಾ ಕೈಂಕರ್ಯವನ್ನು ಅದ್ಧೂರಿಯಾಗಿ ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ ಮಹಾರುದ್ರಭಿಷೇಕ,ಅಭಿಷೇಕ, ಮಹಾಮಂಗಳಾರತಿಯೊoದಿಗೆ ಸಾರ್ವಜನಿಕರಿಗೆ ಅನ್ನದಾಸೋಹ ಕಾರ್ಯಕ್ರಮ ಹಾಗೂ ಸಂಜೆ ಏಕಾದಶ ರುದ್ರಹೋಮ, ಮಹಾರುದ್ರಹೋಮ, ಬಿಲ್ವಾರ್ಚನೆ,ಪುಷ್ಪಾರ್ಚನೆಯನ್ನು ನೆರವೇರಿಸಲಾಗುವುದು ಸಂಜೆಯು ಸಹ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿರುತ್ತದೆ.
ಈ ಮಂಡಲ ಪೂಜಾ ಕಾರ್ಯಕ್ರಮಕ್ಕೆ ಭಕ್ತಾಧಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಗುರು ಸಿದ್ಧರಾಮೇಶ್ವರರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಅರ್ಚಕರು ಮನವಿ ಮಾಡಿಕೊಂಡಿದ್ದಾರೆ.