ಸಕಲೇಶಪುರ-ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿ.ಜೆ.ಪಿ ಮುಖಂಡರಾದ ಹೆತ್ತೂರು ದೇವರಾಜ್ ಆಯ್ಕೆಯಾಗಿದ್ದಾರೆ.
ಇಂದು ಕೃಷಿ ಇಲಾಖೆಯ ಕಚೇರಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹೆತ್ತೂರು ದೇವರಾಜ್ ಹಾಗು ಪ್ರಕಾಶ್ ಅಧ್ಯಕ್ಷ ಗಾದಿಗಾಗಿ ಸ್ಪರ್ಧೆ ನಡೆಸಿದರು.ಒಟ್ಟು 15 ನಿರ್ದೇಶಕರಿದ್ದು ಅದರಲ್ಲಿ ಒಬ್ಬ ನಿರ್ದೇಶಕರು ಗೈರಾಗಿದ್ದು ಹೆತ್ತೂರು ದೇವರಾಜ್ 11 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದರು.
ಈ ಮೂಲಕ ಸತತವಾಗಿ ಮೂರನೇ ಬಾರಿ ಕೃಷಿಕ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಹೆತ್ತೂರು ದೇವರಾಜ್ ದಾಖಲೆಯನ್ನು ನಿರ್ಮಿಸಿದಂತಾಗಿದೆ.
ಜಿಲ್ಲಾ ಪ್ರತಿನಿಧಿ ಆಯ್ಕೆಗೆ ಸ್ಪರ್ಧಿಸಿದ್ದ ಎಂ.ಆರ್ ಸಂಪತ್ ಕುಮಾರ್ ಪ್ರತಿಸ್ಪರ್ಧಿ ನಾರಾಯಣ ಆಳ್ವ ವಿರುದ್ದ 10 ಮತ ಪಡೆದು ಜಯಶೀಲರಾದರು.ಉಪಾಧ್ಯಕ್ಷ ಸ್ಥಾನಕ್ಕೆ ಹೊಸರಳ್ಳಿ ಗಣೇಶ್,ಪ್ರಧಾನ ಕಾರ್ಯದರ್ಶಿಯಾಗಿ ಮೂಗಲಿ ಕೆ.ಎ ಲಿಂಗರಾಜ್,ಖಜಾಂಚಿಯಾಗಿ ನಾಗೇಶ್ ಎಂ.ಆರ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕರಾದ ಯು.ಎಂ ಪ್ರಕಾಶ್ ಕುಮಾರ್ ಕಾರ್ಯ ನಿರ್ವಹಿಸಿದರು.
——————ಎಸ್.ಕೆ ರಕ್ಷಿತ್