ಕೆ.ಆರ್.ಪೇಟೆ-ತಾಲ್ಲೂಕಿನ ಕಸಬಾ ಹೋಬಳಿಯ ಸಾಧುಗೋನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅನಿತಾ ಮಂಜೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಹಿಂದಿನ ಅಧ್ಯಕ್ಷೆ ಆಶಾ ಶ್ರೀನಿವಾಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಅನಿತಾ ಮಂಜೇಗೌಡ ಹೊರತುಪಡಿಸಿ ಉಳಿದ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್ ಕುಮಾರ್ ಅವಿರೋಧವಾಗಿ ಆಯ್ಕೆಯನ್ನು ಘೋಷಿಸಿದರು.ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಪವಿತ್ರ ತಿಮ್ಮೇಗೌಡ ಕಾರ್ಯ ನಿರ್ವಹಿಸಿದರು.
ಸಂಘದ ನೂತನ ಅಧ್ಯಕ್ಷೆ ಅನಿತ ಮಂಜೇಗೌಡ ಮಾತನಾಡಿ, ನಮ್ಮ ಗ್ರಾಮದ ಮುಖಂಡ ಎಸ್.ಎಂ ಲೋಕೇಶ್ ನಾಯಕತ್ವದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೆ. ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷಬೇಧ ಮರೆತು ಸರ್ವಾನುಮತದಿಂದ ಅಧ್ಯಕ್ಷರಾಗಲು ಸಹಕರಿಸಿದ ಕಾರ್ಯಕಾರಿ ಸಮಿತಿಯ ನಿರ್ದೇಶಕರು ಮತ್ತು ಸಂಘದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ನನ್ನ ಆಡಳಿತ ಅವಧಿಯಲ್ಲಿ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸಲು ಶ್ರಮವಹಿಸುತ್ತೇನೆ ಎಂದ ಅವರು ಹಾಲು ಉತ್ಪಾದಕರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹಾಲು ಉತ್ಪಾದಕರಲ್ಲಿ ಮನವಿ ಮಾಡಿಕೊಂಡರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮುಖಂಡ ಎಸ್.ಎಂ ಲೋಕೇಶ್, ನಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗ್ರಾಮಸ್ಥರು ಪಕ್ಷಾತೀತವಾಗಿ ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ್ದಾರೆ. ಅದರಂತೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು .ನೂತನ ಆಡಳಿತ ಮಂಡಳಿಯವರು ಸಂಘದ ಮತ್ತು ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ,ಎಲ್ಲಾ ಸದಸ್ಯರಿಗೆ ಯಶಸ್ವಿನಿ ಯೋಜನೆಯನ್ನು ಮಾಡಿಸಿ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಅರಿವು ಮೂಡಿಸಬೇಕು. ಪ್ರತಿ ರೈತರು ಗುಣಮಟ್ಟದ ಹಾಲು ಪೂರೈಸಿ ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಚಂದ್ರಕಲಾ ರಾಜು,ನಿರ್ದೇಶಕರಾದ ಪ್ರೇಮ ಚಂದ್ರಹಾಸೆಗೌಡ,ಕೆ.ಬಿ.ರೇಖಾ ಲೋಕೇಶ್, ಅನ್ನಪೂರ್ಣ ನಂಜುoಡೇಗೌಡ, ಪಾರ್ವತಮ್ಮ ರಂಗೇಗೌಡ, ಪದ್ಮ ಅಣ್ಣೇಗೌಡ, ಹೇಮ ಮಂಜು, ಮುಖಂಡರುಗಳಾದ ಎಸ್.ಎಂ ಲೋಕೇಶ್,ಗ್ರಾ.ಪಂ ಸದಸ್ಯ ಆರ್ ಕುಮಾರ್, ಪಟೇಲ್ ತಮ್ಮೆಗೌಡ,ಎಸ್.ಎಂ ರಮೇಶ್, ಎಸ್. ಕೆ ಪ್ರಭಾಕರ್, ಗ್ರಾ.ಪಂ ಮಾಜಿ ಅಧ್ಯಕ್ಷ ಎಚ್.ಬಿ ಸುರೇಶ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಪಾರ್ವತಮ್ಮ ಮಂಜು, ಕೋಳಿ ಮಂಜು,ಮಾಜಿ ಸದಸ್ಯೆ ಸೌಭಾಗ್ಯ ಶಂಕರಯ್ಯ,ವಕೀಲ ಎಸ್.ಜೆ. ಮಂಜೇಗೌಡ ಲೋಹಿತ್,ರಘು, ನಂಜುoಡೇಗೌಡ,ಲೋಕೇಶ್,ಕೀರ್ತಿರಾಜು,ಎಸ್. ಎನ್ ಮಂಜುನಾಥ್, ಹಾಲು ಪರೀಕ್ಷಕಿ ಸಾಕಮ್ಮ ವೆಂಕಟೇಶ್, ಶೋಭ ಬಸವರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
————–—-ಶ್ರೀನಿವಾಸ್ ಆರ್