ಕೆ.ಆರ್.ಪೇಟೆ-ಕೃಷಿಕ ಸಮಾಜದ ಅಧ್ಯಕ್ಷರಾಗಿ ನಾಟನಹಳ್ಳಿ ಎನ್.ಎಸ್.ಗಂಗಾಧರ್-ಉಪಾಧ್ಯಕ್ಷರಾಗಿ ಎಸ್.ಎನ್.ಪ್ರಭಾಕರ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಕೆ.ಜಗದೀಶ್ ಆಯ್ಕೆ

ಕೆ.ಆರ್.ಪೇಟೆ-ತಾಲ್ಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ನಾಟನಹಳ್ಳಿ ಎನ್.ಎಸ್. ಗಂಗಾಧರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ತಾಲ್ಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ನಾಟನಹಳ್ಳಿ ಗಂಗಾಧರ್, ಉಪಾಧ್ಯಕ್ಷರಾಗಿ ಎಸ್.ಎನ್.ಪ್ರಭಾಕರ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಕೆ.ಜಗದೀಶ್, ಖಜಾಂಚಿಯಾಗಿ ಬಿ.ಸಿ.ಸ್ವಾಮೀಗೌಡ, ಜಿಲ್ಲಾ ಪ್ರತಿನಿಧಿಯಾಗಿ ಹೆತ್ತಗೋನಹಳ್ಳಿ ಹೆಚ್.ಜೆ‌.ನಾರಾ ಯಣಗೌಡ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಹೆಚ್.ಜೆ.ಸಂತೋಷ್ ಕುಮಾರ್ ಪ್ರಕಟಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಕೆ.ಬಿ.ಈಶ್ವರಪ್ರಸಾದ್, ಎನ್.ಮರಿಸ್ವಾಮೀಗೌಡ, ರಾಮಸ್ವಾಮಿ, ಮುಖಂಡರಾದ ಕೆ.ಎಸ್.ಬಸವೇಗೌಡ, ಎನ್.ಕೆ.ವಿಜಯಕುಮಾರ್, ಎನ್.ಜೆ.ಹೇಮಂತ್ ಕುಮಾರ್(ತಮ್ಮಣ್ಣ), ಬೋರೇಗೌಡ, ಜಿಲ್ಲಾ ಕರವೇ ಅಧ್ಯಕ್ಷ ಡಿ.ಎಸ್.ವೇಣು, ತಾಲ್ಲೂಕು ಕರವೇ ಅಧ್ಯಕ್ಷ ಟೆಂಪೋ ಶ್ರೀನಿವಾಸಗೌಡ, ಪುರಸಭಾ ಸದಸ್ಯ ಪ್ರಮೋದ್, ಅಗ್ರಹಾರಬಾಚಹಳ್ಳಿ ಸ್ವಾಮಿ, ಅಮ್ಮು ಶ್ರೀಧರ್, ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಎನ್.ಜಾನಕೀರಾಂ, ಬಿ.ಎಲ್.ತೇಜಸ್ವಿಕಿರಣ್, ಎಸ್.ಆರ್.ನವೀನ್ ಕುಮಾರ್, ಎ.ಆರ್.ರಘು, ಎ.ಎಸ್.ರಮೇಶ್, ಸಿ.ಎಸ್.ರಾಮಕೃಷ್ಣೇಗೌಡ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಅಭಿನಂದಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಟನಹಳ್ಳಿ ಗಂಗಾಧರ್ ಮಾತನಾಡಿ, ತಾಲ್ಲೂಕು ರೈತರ ಜೀವನಾಡಿಯಾದ ಕೃಷಿ ಇಲಾಖೆ ಮತ್ತು ರೈತರ ನಡುವೆ ಕೊಂಡಿಯಾಗಿರುವ ಕೃಷಿಕ ಸಮಾಜದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕರಿಗೂ, ಸದಸ್ಯರಿಗೂ ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು.

——–ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?