ಮೈಸೂರು:ಮೈಸೂರು ಕನ್ನಡ ವೇದಿಕೆಯಿಂದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಜಯಂತ್ಯೋತ್ಸವ ಅಂಗವಾಗಿ ಸಮಾಜದ ಕಾರ್ಯಕ್ರಮದ ಅಂಗವಾಗಿ ಸಾಧಕರಿಗೆ ರಾಯಣ್ಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಿದ್ದಪ್ಪ ವೃತ್ತದ ಹೊಯ್ಸಳ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಯೋಧ ಶ್ರೀ ಬಿದ್ದಪ್ಪ ಉದ್ಘಾಟಿಸಿದರು. ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಡಾ.ನಂಜುಂಡಸ್ವಾಮಿ ಹರದನಹಳ್ಳಿ ಪ್ರಧಾನ ಭಾಷಣ ಮಾಡಿದರು.ಮೈಸೂರು ಮಹಾನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಸಾಧಕರನ್ನು ಸನ್ಮಾನಿಸಿದರು. ಪೊಲೀಸ್ ನಿರೀಕ್ಷಕ ಎನ್.ಸಿ. ನಾಗೇಗೌಡ, ಸಮಾಜ ಸೇವಕ ಡಾ.ಶ್ರೀಷಾಭಟ್ ಅತಿಥಿಗಳಾಗಿದ್ದರು.ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಅಧ್ಯಕ್ಷತೆವಹಿಸಿದ್ದರು. ನಾಲಾಬೀದಿ ರವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಚೇತನ್‌ರಾಜ್( ಸಮಾಜ ಸೇವೆ), ಡಾ.ಶ್ರೀಷಾಭಟ್( ಸಮಾಜ ಸೇವೆ) ಆರ್. ಶ್ರೀಪಾಲ್(ಅಸಂಘಟಿತ ಕಾರ್ಮಿಕರ ಸೇವೆ) ಬಿದ್ದಪ್ಪ (ನಿವೃತ್ತ ಯೋಧ), ರವಿ (ಯೋಧ), ಲೋಕೇಶ್( ಸಮಾಜ ಸೇವಕ), ಎನ್. ಪ್ರಜ್ವಲ್(ಪತ್ರಕರ್ತ), ಪುರುಷೋತ್ತಮ್( ಸಂಗೀತ ಕ್ಷೇತ್ರ), ಸಿಂಡಿಕೇಟ್ ಸದಸ್ಯೆ ಡಾ.ಕಾವೇರಿ ಪ್ರಕಾಶ್(ಶಿಕ್ಷಣ ಕ್ಷೇತ್ರ), ಡಾ.ಸೌಮ್ಯಮೂರ್ತಿ( ಔಷಧ ತಜ್ಞೆ), ರೇಖಾ ಮನಶಾಂತಿ( ಮನೋವೈದ್ಯೆ), ವಿಜಯಶ್ರೀ( ಸಂಗೀತ), ಹೆಚ್.ಕೆ. ಕೋಮಲ( ಸೌಂದರ್ಯ ತಜ್ಞೆ), ಭಾರತಿ ಶಿರೂರು(ಕ್ರೀಡೆ), ಪ್ರಿಯಾ(ಸುಗಮ ಸಂಗೀತ) ಅವರಿಗೆ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆ ಪದಾಧಿಕಾರಿಗಳಾದ ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್‌ಬಾಬು, ಗೋಪಿ, ಬೀಡಾಬಾಬು, ಮದನ್, ಕಾವೇರಮ್ಮ, ಮಾಲಿನಿ, ಭವಾನಿ, ಚಂದ್ರು, ಎಲ್‌ಐಸಿ ಸಿದ್ದಪ್ಪ, ಗೋವಿಂದರಾಜು, ಮನೋಹರ, ದೊರೆಸ್ವಾಮಿ, ಸ್ವಾಮಿ, ಪುಷ್ಪಲತಾ, ಅರವಿಂದ್, ಮಾದಪ್ಪ, ಹರೀಶ್‌ಕುಮಾರ್, ಮಹದೇವಸ್ವಾಮಿ, ಶ್ರೀನಿವಾಸ್, ರಾಧಾಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
———————––ಮಧುಕುಮಾರ್