ಚಿಕ್ಕಮಗಳೂರು-ಹಿರೇಮಗಳೂರಿನ ಪ್ರಭುಲಿಂಗ ಪ್ರೌಢಶಾಲೆಯ ಮಕ್ಕಳ ಅನುಕೂಲಕ್ಕಾಗಿ ದಾನಿಗಳ ನೆರವಿನಿಂದ ಸುಮಾರು 1 ಲಕ್ಷ ಮೌಲ್ಯ ವೆಚ್ಚದಲ್ಲಿ ಹತ್ತು ಡೆಸ್ಕ್ ಬೆಂಚುಗಳನ್ನು ಬುಧವಾರ ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.
ಬಳಿಕ ಮಾತನಾಡಿದ ದಾನಿ ಆರ್.ಎಂ.ಉಮಾಮಹೇಶ್ವರಪ್ಪ, ಸರ್ಕಾರಿ ಶಾಲೆಗಳ ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವಂಥ ಪ್ರಜೆಗಳು. ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸೇರಿದಂತೆ ಅನೇಕ ಗಣ್ಯರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಪೂರೈಸಿ ಸಾಧಕರಾದವರು ಎಂದರು.
ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಬೋಧಕರಿಂದ ಸರ್ಕಾರಿ ಶಾಲೆಯ ಮಕ್ಕಳು ದೇಶ-ವಿದೇಶದಲ್ಲಿ ಛಾಪು ಮೂಡಿಸಿದ್ದಾರೆ. ಮಕ್ಕಳು ಕೀಳರಿಮೆ ಹೊಂದದೇ ದಾನಿಗಳು ಹಾಗೂ ಸಂಘ-ಸoಸ್ಥೆಗಳ ನೆರವಿ ನಿಂದ ದೊರೆಯುವ ಸೌಲಭ್ಯವನ್ನು ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಆರ್.ಯು.ರಶ್ಮಿ, ಕೆ.ಎಂ.ಮಲ್ಲಿಕಾರ್ಜುನ್, ಆರ್.ಯು.ರಮ್ಯ, ಎನ್. ಈ.ಚೇತನ್, ಆರ್.ಯು.ರಂಜನಿ, ಕೆ.ಎಂ.ರುದ್ರಸ್ವಾಮಿ, ಶಾಲೆಯ ಮುಖ್ಯೋಪಾಧ್ಯಾಯ ನರಸಿಂಹ ಹಾಗೂ ಶಿಕ್ಷಕರು ಹಾಜರಿದ್ದರು.
———–——-ಸುರೇಶ್