ಮೈಸೂರು:ಮೈಸೂರಿನ ರಾಜಕುಮಾರ್ ರಸ್ತೆಯಲ್ಲಿರುವ ಶಕ್ತಿನಗರ ಬಡಾವಣೆಯಲ್ಲಿ ಸಂಧ್ಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಕೆ.ಎಸ್.ಟಿ.ಎ ಅಧ್ಯಕ್ಷರಾದ ಜಾನ್ ಉದ್ಘಾಟನಾ ಕಾರ್ಯವನ್ನು ಟೇಪ್ ಕತ್ತರಿಸುವ ಮೂಲಕ ನೆರವೇರಿಸಿದರು.
ರಾಘವೇಂದ್ರ ಬಡಾವಣೆಯ ಸಂಧ್ಯಾ ರಾಣಿಯವರು ತಮ್ಮದೇ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಸಮಾಜ ಸೇವಾ ಕಾರ್ಯಕ್ರಮ ಗಳನ್ನು ಮಾಡಿಕೊಂಡು ಬರುತ್ತಿದ್ದು,ತಮ್ಮ ಸೇವಾ ಕಾರ್ಯವನ್ನು ವಿಸ್ತರಿಸುತ್ತ ಟೈಲರಿಂಗ್ ತರಬೇತಿ ಕೇಂದ್ರವನ್ನು ಮಹಿಳೆಯರ ಅಭ್ಯುದಯಕ್ಕಾಗಿ ಪ್ರಾರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ನಾಗರೀಕರನ್ನು ಸಂಧ್ಯಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಂಗಲಕ್ಷಣಂ ಫೌಂಡೇಶನ್ ನ ಅಧ್ಯಕ್ಷೆ ವಿದುಷಿ ಡಾ. ಚಿತ್ರಾ ಬಿಳಿಗಿರಿ,ಶ್ರೀ ಚಾಮುಂಡೇಶ್ವರಿ ಮಹಿಳಾ ಮತ್ತು ಮಕ್ಕಳ ಒಕ್ಕೂಟದ ಉಪಾಧ್ಯಕ್ಷರಾದ ತಬ್ ಸುಮ್,ಜಾನ್,ಚಂದ್ರಣ್ಣ,ಈರಣ್ಣ,ಸುಮಬಾಯಿ,ಸಿದ್ದೇಗೌಡ,ಹಾಗೂ ಮಹಿಳೆಯರು ಭಾಗಿಯಾಗಿದ್ದರು.
—————–ಮಧುಕುಮಾರ್