ಚಿಕ್ಕಮಗಳೂರು-ಕಡವಂತಿ ಗ್ರಾ.ಪಂ ಅಧ್ಯಕ್ಷೆಯಾಗಿ ಸಿ.ಪಿ.ಐ ಪಕ್ಷದ ಗೀತಾ ಅವಿರೋಧ ಆಯ್ಕೆ

ಚಿಕ್ಕಮಗಳೂರು-ತಾಲ್ಲೂಕಿನ ಕಡವಂತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಸಿಪಿಐ ಪಕ್ಷದ ಗೀತಾ ಅವಿರೋಧ ಆಯ್ಕೆಯಾದರು.

ಪಂಚಾಯಿತಿಯಲ್ಲಿ ಒಟ್ಟು 7 ಸದಸ್ಯರ ಬಲವಿದೆ. ಈ ಪೈಕಿ ಕಾಂಗ್ರೆಸ್ 4, ಸಿಪಿಐ 1 ಹಾಗೂ ಬಿಜೆಪಿ 2 ಸದಸ್ಯರನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಸಿಪಿಐ ಪಕ್ಷ ಬಹುಮತ ಸಾಬೀತಾಗಿ ಗೀತಾ ಹೆಸರು ಸೂಚಿಸಿದ ಮೇರೆಗೆ ಚುನಾವಣಾಧಿಕಾರಿ, ತಾ.ಪಂ ಇಓ ವಿಜಯ್‌ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಭಾಗ್ಯಲಕ್ಷ್ಮಿ , ರಂಗಪ್ಪಶೆಟ್ಟಿ, ಧನಲಕ್ಷ್ಮೀ, ಕೃಷ್ಣಮೂರ್ತಿ, ಪಿ.ಡಿ.ಓ ಸಹದೇವ್,ಸಿಪಿಐ ಮುಖಂಡರಾದ ಎನ್.ಆರ್.ಮಂಜುನಾಥ್, ಬಿ.ಡಿ.ಕೃಷ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.

————–—-ಸುರೇಶ್

Leave a Reply

Your email address will not be published. Required fields are marked *

× How can I help you?