ಚಿಕ್ಕಮಗಳೂರು-ಪ್ರತಿನಿತ್ಯ ವಾಹನ ದಟ್ಟಣೆಯಿಂದ ಕೂಡಿರುವ ನಗರದ ನಾಯ್ಡು ರಸ್ತೆಯನ್ನು ಶೀಘ್ರವೇ ದುರಸ್ಥಿಪಡಿಸಬೇಕು ಎಂದು ಆಗ್ರಹಿಸಿ ನಾಯ್ಡು ರಸ್ತೆ ಅಂಗಡಿ ಮಾಲೀಕರುಗಳು ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಉಪ್ಪಳ್ಳಿ ಕೆ.ಭರತ್, ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ನಾಯ್ಡು ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಅಂಗಡಿ ಮುoಗಟ್ಟುದಾರರು ವ್ಯಾಪಾರ ನಡೆಸುತ್ತಿದ್ದಾರೆ. ಅಲ್ಲದೆ ಪ್ರತಿದಿನವು ಬಹುತೇಕ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವ ಮುಖ್ಯರಸ್ತೆ ಯಾಗಿದೆ ಎಂದರು.
ಕಳೆದ ಎಂಟು ತಿಂಗಳ ಹಿಂದೆ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಂಪರ್ಕ ಹಾಗೂ ಕೇಬಲ್ ಅಳವಡಿಸುವ ಸಂಬoಧ ರಸ್ತೆಯನ್ನು ಅನೇಕ ಬಾರಿ ಬಗೆದಿದ್ದು, ಇದುವರೆಗೂ ರಸ್ತೆಯನ್ನು ದುರಸ್ಥಿ ಪಡಿಸಿರುವುದಿಲ್ಲ.ರಸ್ತೆಯ ವಿಪರೀತ ದೂಳಿನಿಂದ ಅಂಗಡಿದಾರರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಜಿಲ್ಲಾಧಿಕಾರಿ ಅಧೀನದಲ್ಲಿ ತುರ್ತು ಪರಿಸ್ಥಿತಿ ನಿವಾರಣೆಗೆ ವಿಶೇಷ ಅನುದಾನವಿದೆ. ಶಾಸಕರು ಹಾಗೂ ಮಂತ್ರಿಗಳ ಕಡೆ ಬೆಟ್ಟು ತೋರಿಸದೇ ಗುಂಡಿಗೊಟರು ಮುಚ್ಚಲು,ದುರಸ್ಥಿಗೊಂಡ ಪೈಪುಗಳನ್ನು ಅಳವಡಿಸಲು ಜನಪ್ರತಿನಿಧಿಗಳ ಒಪ್ಪಿಗೆಯ ಅಗತ್ಯ ಇರುವುದಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ವಿವೇಚನ ಅಡಿಯಲ್ಲಿ ಕಾರ್ಯ ನಿರ್ವ ಹಿಸಬೇಕು ಎಂದು ಹೇಳಿದರು.
ನಗರದ ಸಣ್ಣಪುಟ್ಟ ಕಾಮಗಾರಿಗಳಿಗೆ ಶಾಸಕ, ಸರ್ಕಾರವನ್ನು ದೂರುವುದು ಸಮಂಜಸವಲ್ಲ. ಸಾರ್ವಜನಿಕ ಸಮಸ್ಯೆಗಳಿಗೆ ಸಂಬoಧಿಸಿದ ಅಧಿಕಾರಿಗಳಿಗೆ ಭೇಟಿ ಮಾಡಲು ಬಂದಲ್ಲಿ ಸಂಯಮದಿoದ ನಡೆದು ಕೊಳ್ಳಲು ಸೂಚಿಸಬೇಕು. ಕೆಲಸ ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ವರ್ಗಾವಣೆ ತೆಗೆದುಕೊಂಡು ಹೋಗಬಹುದು ಎಂದರು.
ರಸ್ತೆ ಡಾಂಬರೀಕರಣಕ್ಕೆ ಸಂಬoಧಿಸಿದ ಅಧಿಕಾರಿಗೆ ಮನವಿ ಸಲ್ಲಿಸಲಾದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮವಹಿಸಿ ರಸ್ತೆಗೆ ಡಾಂಬರೀಕರಣ ಮಾಡಿಸಿ ಅಂಗಡಿದಾರರನ್ನು ಕಾಪಾಡಬೇಕು, ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಬೇಕು ಹಾಗೂ ತಾತ್ಕಾಲಿಕವಾಗಿ ಎಲ್ಲಾ ರಸ್ತೆಗಳನ್ನು ವಾರದೊಳಗೆ ದುರಸ್ಥಿಗೊಳಿಸದಿದ್ದಲ್ಲಿ ರಸ್ತೆ ತಡೆ ನಡೆಸಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಉಪ್ಪಲ್ಲಿ ಭರತ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಯ್ಡು ರಸ್ತೆ ಅಂಗಡಿ ಮಾಲೀಕರುಗಳಾದ ಸುರೇಶ್, ಕುಮಾರ್, ಹೇಮಂತ್ ಕುಮಾರ್, ಸತೀಶ್, ಕರುಣಾಕರ್ಶೆಟ್ಟಿ, ಮಂಜುನಾಥ್, ಭಾಗ್ಯ ಮತ್ತಿತರರಿದ್ದರು.
—–——ಸುರೇಶ್