ಚಿಕ್ಕಮಗಳೂರು-ದೇಶದ ಪ್ರಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆರವರ 194ನೇ ಜನ್ಮ ದಿನದ ಅಂಗವಾಗಿ ನಗರದ ಎಸ್.ಟಿ.ಜೆ. ಕಾಲೇಜಿನಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ಜನ್ಮದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸಂಸ ತಾಲ್ಲೂಕು ಸಂಚಾಲಕಿ ಗೀತಾ ವಹಿಸಿದ್ದರು. ಬಿಎಸ್ಪಿ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾ ಸಂಚಾಲಕಿ ಕಬ್ಬಿಕೆರೆ ಮೋಹನ್ ಕುಮಾರ್, ವಕೀಲರಾದ ಪರ ಮೇಶ್ವರ್, ಕಾಲೇಜು ಪ್ರಾಂಶುಪಾಲ ಭಾರತಿ, ಸಂಘಟನಾ ಸಂಚಾಲಕ ಹರೀಶ್, ಮುಖಂಡರಾದ ಗಂಗಾಧರ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಇದ್ದರು.
———–ಸುರೇಶ್