ಶಿವಮೊಗ್ಗ:ಸರ್ಕಾರದ ಅನುದಾನ ಮತ್ತು ವಿವಿದ ಸರ್ಕಾರದ ಇಲಾಖೆಗಳು ಹಾಗೂ ಸಂಸದರು, ಶಾಸಕರ ಅನುದಾನದಿಂದ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಶಿವಮೊಗ್ಗದಲ್ಲಿನ ಪತ್ರಕರ್ತರಿಗೋಸ್ಕರ ನಿರ್ಮಾಣವಾದ ಶಿವಮೊಗ್ಗದಲ್ಲಿನ ಪತ್ರಿಕಾಭವನ ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಅಧ್ಯಕ್ಷರ ಖಾಸಗಿ ಸ್ವಂತ ಆಸ್ತಿಯಾಗಿದೆ.ಹಣಕಾಸಿನ ಲೆಕ್ಕಾಚಾರವನ್ನು ಕೂಡ ಕೊಟ್ಟಿಲ್ಲ. ಆದ್ದರಿಂದ ಕೂಡಲೇ ಪತ್ರಿಕಾಭವನಕ್ಕೆ ಆಡಳಿತಾ ಧಿಕಾರಿಯನ್ನು ನೇಮಿಸುವಂತೇ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಶಿವಮೊಗ್ಗ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೇ KWJV ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಇಂದು ಬೆಳಿಗ್ಗೆ ಜಿಲ್ಲಾಧಿಕಾ ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
KWJV ಶಿವಮೊಗ್ಗ ಘಟಕದ ಅಧ್ಯಕ್ಷರಾದ ಡಿ.ಜಿ.ನಾಗರಾಜ್ ಮಾತನಾಡುತ್ತಾ, ಶಿವಮೊಗ್ಗ ಪತ್ರಿಕಾ ಭವನದ ನಿರ್ವಹಣೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಗೆ ಕೆಲವು ಒಪ್ಪಂದವನ್ನು ಮಾಡಿಕೊಂಡು ಜಿಲ್ಲಾಡಳಿತದಿಂದ ನಿರ್ವಹಣೆಗೆ ಬಿಟ್ಟು ಕೊಡಲಾಗಿತ್ತು.ಆದರೇ ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪ್ರತಿಯೊಂದು ಪ್ರೆಸ್ ಮೀಟ್ ಮಾಡುವ ಆಯೋಜಕರಿಂದ ರೂ.2 ಸಾವಿರ ವಸೂಲಿ ಮಾಡುತ್ತಿದ್ದಾರೆ.ಪ್ರೆಸ್ ನೋಟ್ ಪಡೆಯುವಾಗ ರೂ.150 ವಸೂಲಿ ಮಾಡಲಾಗುತ್ತಿದೆ. ಈ ಹಣದ ಲೆಕ್ಕಾಚಾರವನ್ನು ಇದುವರೆಗೆ ಜಿಲ್ಲಾಡಳಿತಕ್ಕಾಗಲೀ ಪತ್ರಕರ್ತರಿಗೆ ಆಗಲೀ ತೋರಿಸಿಲ್ಲ.ತಿಂಗಳಿಗೆ ಸುಮಾರು 50 ಸಾವಿರ ರೂ ಸಂಗ್ರಹವಾಗುತ್ತದೆ. ಅದರ ಜೊತೆಯಲ್ಲಿ ಇತರೇ ಕಾರ್ಯಕ್ರಮ ಗಳಿಗೆ ಸಾವಿರಾರು ರೂ ಹಣ ಪಡೆಯಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ವರ್ಷಾವಾರು ಇದುವರೆಗೂ ಸಂಗ್ರಹಿಸಿದ ಲಕ್ಷ ಲಕ್ಷ ಹಣದ ಲೆಕ್ಕಾಚಾರ ಏನು? ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ಸರ್ಕಾರದ ಅನುದಾನದಿಂದ ನಿರ್ಮಾಣ ವಾದ ಪತ್ರಿಕಾಭವನ ಪ್ರೆಸ್ ಟ್ರಸ್ಟ್ ನ ಸ್ವತ್ತು ಆಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಪತ್ರಿಕಾಭವನದ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದ ಎಲ್ಲಾ ಪತ್ರಕರ್ತರು ಭಾಗವ ಹಿಸಲು ಬಿಡುತ್ತಿಲ್ಲ.ಮತ್ತು ಪ್ರೆಸ್ ಟ್ರಸ್ಟ್ ನಿಂದ ಕೆಲವು ಗುಂಪು ಮಾಡಿ ಅವರಿಗೆ ಮಾತ್ರ ಪ್ರವೇಶವನ್ನು ನೀಡಲಾಗುತ್ತಿದೆ.ಸುದ್ದಿಯನ್ನು ಕಳುಹಿಸಲಾಗುತ್ತಿದೆ. ಇದು ಶೋಚನೀಯವಾದ ಸಂಗತಿಯಾಗಿದೆ ಎಂದರು
ಆದ್ದರಿಂದ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಪತ್ರಿಕಾಭವನವನ್ನು ಕೂಡಲೇ ತಮ್ಮ ವಶಕ್ಕೆ ಪಡೆದು ಅಲ್ಲಿಗೆ ಆಡಳಿತಾಧಿಕಾರಿ ಯನ್ನು ನೇಮಿಸಬೇಕು. ಶಿವಮೊಗ್ಗದ ಪತ್ರಿಕಾ ಭವನ ಶಿವಮೊಗ್ಗದಲ್ಲಿನ ಎಲ್ಲಾ ಪತ್ರಕರ್ತರಿಗೂ ಉಪಯೋಗ ವಾಗುವಂತಾಗಬೇಕು.ಎಲ್ಲರೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವಂತಾಗಬೇಕು ಎಂಬುದು ನಮ್ಮ ಸಂಘದ ಒತ್ತಾಯವಾಗಿದೆ.
ಮತ್ತು ಅಲ್ಲಿ ಪತ್ರಿಕಾಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಸೂಲಿ ಮಾಡುವ ಹಣ ಮತ್ತು ಇತರೇ ಕಾರ್ಯಕ್ರಮದ ಬಗ್ಗೆ ವಸೂಲಿಯಾಗುವ ಹಣಕಾಸಿನ ಮಾಹಿತಿಯನ್ನು ಪಡೆದು ಆ ಹಣವನ್ನು ಜಿಲ್ಲಾಧಿಕಾರಿಗಳು ಪ್ರೆಸ್ ಟ್ರಸ್ಟ್ ಅಧ್ಯಕ್ಷರಿಂದ ವಸೂಲಿ ಮಾಡಬೇಕು.
ಜಿಲ್ಲಾಢಳಿತಕ್ಕೆ ಅಥವಾ ಸರ್ಕಾರದ ಖಜಾನೆಗೆ ಪತ್ರಿಕಾಭವನ ದಿಂದ ಸಂಗ್ರಹವಾದ ಹಣವನ್ನು ಕೂಡಲೇ ಕಟ್ಟುವಂತೆ ಆದೇಶ ಮಾಡಬೇಕು. ಮೇಲ್ಕಂಡ ಎಲ್ಲಾ ದೂರಿನ ಬಗ್ಗೆ ಕೂಡಲೇ ವಿಚಾರಣೆ ತನಿಖೆ ಮಾಡಿ ಸೂಕ್ತವಾದ ಕ್ತಮ ಕೈಗೊಳ್ಳಬೇಕು ಎಂಬುದು ಸಮಾನ ಮನಸ್ಕ ಪತ್ರಕರ್ತರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸದಸ್ಯರ ಒತ್ತಾಸೆಯಾಗಿದೆ.ಕೂಡಲೇ ಪತ್ರಿಕಾಭವನ ವನ್ನು ತಮ್ಮ ಸುಪರ್ದಿಗೆ ಪಡೆಯಬೇಕಾಗಿ ವಿನಂತಿಸಲಾಗಿದೆ.
ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಎಲ್ಲಾ ಸದಸ್ಯರಿಗೂ ಸಹ ಶಿವಮೊಗ್ಗದಲ್ಲಿನ ಪತ್ರಿಕಾಭವನದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕಾಗಿ ಮನವಿ ಮಾಡಲಾಗಿದೆ.
ಈ ಬಗ್ಗೆ ಸೂಕ್ತವಾದ ತನಿಖೆ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಗಳು ಸೂಕ್ತವಾದ ಕ್ತಮ ಕೈಗೋಳ್ಳುವಂತೇ ಮನವಿ ಮಾಡಲಾಗಿದೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಂಬಂಧಿಸಿದ ಪತ್ರಿಕಾಭವನದ ದೂರಿನ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಶಿವಮೊಗ್ಗ ಘಟಕದ ಎಲ್ಲಾ ಪತ್ರಕರ್ತರು ಸದಸ್ಯರು ಸೇರಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಗೆ ಬೀಗ ಹಾಕಿ ಅದರ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಯಥಾಪ್ರತಿಯನ್ನು ಸೂಕ್ತವಾದ ಕ್ತಮಕ್ಕಾಗಿ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕೊಠಡಿ ಸಂಖ್ಯೆ 323, 3ನೇ ಮಹಡಿ, ವಿಧಾನ ಸೌಧ ಬೆಂಗಳೂರು -01 ಇವರಿಗೆ ಕಳುಹಿಸಲಾಗಿದೆ.
ಯಥಾಪ್ರತಿಯನ್ನು ವಿಚಾರಣೆ ತನಿಖೆಗೆ ಮತ್ತು ಕ್ರಮಕ್ಕೆ ಆಗ್ರಹಿಸಿ ಬಿ.ಬಿ. ಕಾವೇರಿ ಭಾ.ಆ.ಸೇ, ಸರ್ಕಾರದ ಕಾರ್ಯದರ್ಶಿಗಳು ನಂ.102, 1ನೇ ಮಹಡಿ, ವಿಕಾಸಸೌಧ, ಬೆಂಗಳೂರು- 560 001 ಇವರಿಗೆ ಕಳುಹಿಸಲಾಗಿದೆ.
ಯಥಾ ಪ್ರತಿಯೊಂದನ್ನು ಸೂಕ್ತವಾದ ಕ್ರಮಕ್ಕೆ ಹೇಮಂತ್ ಎಂ. ನಿಂಬಾಳ್ಕರ್ ಐ.ಪಿ.ಎಸ್ ಆಯುಕ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾಸೌಧ, ಭಗವಾನ್ ಮಹಾವೀರ ರಸ್ತೆ (ಇನ್ ಫೆಂಟ್ರಿ ರಸ್ತೆ) ಬೆಂಗಳೂರು 560001 ಇವರಿಗೆ ಕಳುಹಿಸಲಾಗಿದೆ.
ಮನವಿ ಕೊಡುವ ಸಂದರ್ಭದಲ್ಲಿ KWJV ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ,ಜಿಲ್ಲಾದ್ಯಕ್ಷರು, ಉಪಾಧ್ಯಕ್ಷ ರಾದ ಚಿತ್ರಪ್ಪ ಯರಬಾಳ, ಪ್ರಧಾನ ಕಾರ್ಯದರ್ಶಿ ಡಿ.ಪಿ.ಅರವಿಂದ,ಖಜಾಂಚಿ ಸತೀಶ್ ಗೌಡ ಕೆ.ಎಂ, ಕಾರ್ಯದರ್ಶಿ ಆರ್.ವಿ.ಕೃಷ್ಣ,ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ.,ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ,ನಿರ್ದೆಶಕರಾದ ಹೆಚ್.ಎಸ್.ವಿಷ್ಣುಪ್ರಸಾದ್,ಗಿರೀಶ್ ಬಿ.ಸಿ,ಭರದ್ವಾಜ್ ಯು.ಎಸ್,ಷಡಾಕ್ಷರಪ್ಪ ಜಿ.ಆರ್, ಬಸವರಾಜ್, ಬಾಲಕೃಷ್ಣ ನಾಯಕ್,ಮಂಜಪ್ಪ, ರವಿ,ಮನೋಜ್ ಕಮಾರ್ ಮತ್ತಿತೃಉ ಹಾಜರಿದ್ದರು.