ಅರಕಲಗೂಡು-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ) ವತಿಯಿಂದ ಕೇರಳಾಪುರ ವಲಯದ ಮಧುರನಹಳ್ಳಿ ಕಾರ್ಯಕ್ಷೇತ್ರದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರ ಮವನ್ನು ಆಯೋಜಿಸಲಾಗಿತ್ತು.
ರೈತ ಸಂಘದ ತಾಲೂಕು ಅಧ್ಯಕ್ಷರು ಯೋಗಣ್ಣ ಬೆಳವಾಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚು ಇಳುವರಿ ಸಿಗುತ್ತಿದೆ.ಆದರೆ ಅದರಿಂದ ನಮ್ಮ ಹಾಗು ನಾವು ಬೆಳೆದ ಆಹಾರ ಪದಾರ್ತಗಳನ್ನು ಸೇವಿಸುವವರ ಆರೋಗ್ಯ ಹದಗೆಡುತ್ತಿದೆ. ಜೀವಾಮೃತವನ್ನು ಬಳಸಿ ಬೆಳೆ ಬೆಳೆಯುವುದರಿಂದ ಹೆಚ್ಚು ಆರೋಗ್ಯವನ್ನು ಕಾಪಾಡಿಕೊ ಳ್ಳಬಹುದು.ಕೃಷಿ ಮಾಡುವ ಮುನ್ನ ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ನಂತರ ನಾವು ಕೃಷಿಯನ್ನು ಮಾಡುವುದರಿಂದ ಭೂಮಿಯ ಫಲವತ್ತತೆಯು ಹೆಚ್ಚುತ್ತದೆ. ಹಾಗೂ ಬೆಳೆಯು ಕೂಡ ತುಂಬಾ ಆರೋಗ್ಯಕರವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಮಹೇಶ್, ಒಕ್ಕೂಟದ ಅಧ್ಯಕ್ಷರಾದ ದೇವಿಕಾ, ಗ್ರಾಮದ ಮುಖಂಡರುಗಳಾದ ರವೀಂದ್ರ ಸ್ವಾಮಿ ಗೌಡ್ರು, ರವಿ, ಕೃಷಿ ಮೇಲು ವಿಚಾರಕರಾದ ಸುನಿಲ್ ಕುಮಾರ್ ಎಂ, ವಲಯದ ಮೇಲ್ವಿಚಾರಕ ವಿನಯ್ ಕುಮಾರ್, ಸೇವಾ ಪ್ರತಿನಿಧಿ ಸೋಮಾಚಾರಿ ಮತ್ತು ಗ್ರಾಮದ ರೈತರು ಹಾಗೂ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
———–-ಶಶಿಕುಮಾರ್ ಕೆಲ್ಲೂರು