ಹಾಸನ/ಆಲೂರು-ಸರ್ಕಾರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಕ್ಯಾಪ್ಟನ್ ಶ್ರೀನಿವಾಸ್ ಗೆ ಪಿ.ಹೆಚ್.ಡಿ ಪದವಿ

ಹಾಸನ-ಸರ್ಕಾರಿ ಕಲಾ,ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಹಾಗೂ ಹವ್ಯಾಸಿ ಬರಹಗಾರರೂ ಆಗಿರುವ ಆಲೂರು ತಾಲೂಕಿನ ನಲ್ಲೂರು ಗ್ರಾಮದ ಕ್ಯಾಪ್ಟನ್ ಶ್ರೀನಿವಾಸ ಅವರು ಪಿ.ಹೆಚ್.ಡಿ ಪದವಿಗೆ ಭಾಜನರಾಗಿದ್ದಾರೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ನಿoದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಆನಂದಗೌಡ ಎನ್. ಇವರ ಮಾರ್ಗದರ್ಶನದಲ್ಲಿ “ಹಾಸನ ಜಿಲ್ಲೆಯ ಅಭಿವೃದ್ಧಿಯಲ್ಲಿ ಶ್ರೀ ಹೆಚ್.ಡಿ.ರೇವಣ್ಣರವರ ಆಡಳಿತ ಮತ್ತು ನಾಯಕತ್ವ ಒಂದು ವಿಶ್ಲೇಷಣಾತ್ಮಕ ಅಧ್ಯಯನ” ಎಂಬ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ ದೊರೆತಿದೆ.

Leave a Reply

Your email address will not be published. Required fields are marked *

× How can I help you?