ತುಮಕೂರು:ಟಿ.ಎಲ್.ಕುಂಭಯ್ಯ ಸಮಾಜಕ್ಕೆ ದೊಡ್ಡ ಕೊಡುಗೆ ಯಾಗಿ ದ್ದಾರೆ-ಶಾಸಕ ಜಿ.ಬಿ.ಜ್ಯೋತಿ ಗಣೇಶ್

ತುಮಕೂರು:ತಿಗಳ ಸಮಾಜದ ಹಿರಿಯ ಮುಖಂಡ, ನಗರದ ಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಲ್.ಕುಂಭಯ್ಯ ಅವರ 79ನೇ ಹುಟ್ಟು ಹಬ್ಬವನ್ನು ಸಮಾಜದ ಮುಖಂಡರು ಸೇರಿ ಆಚರಿಸಿ ಸಂಭ್ರಮಿಸಿದರು.

ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಟಿ.ಎಲ್.ಕುಂಭಯ್ಯನವರಿಗೆ ಜನ್ಮದಿನದ ಶುಭಾಶಯ ಕೋರಿ, ಸಮಾಜದ ಸಂಘಟನೆ,ಸೌಹಾರ್ದತೆಗೆ ಹೆಸರಾದ ಕುಂಭಯ್ಯನವರು, ಹಲವು ರೀತಿಯಲ್ಲಿ ಸಮಾಜಕ್ಕೆ ನೆರವಾಗುತ್ತಾ ಎಲ್ಲಾ ಸಮಾಜದವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.

79ನೇ ವಯಸ್ಸಿನಲ್ಲೂ ಸದಾ ಚಟುವಟಿಕೆಯಿಂದ ಸಮಾಜದ ಕಾರ್ಯದಲ್ಲಿ ತೊಡಗಿಕೊಂಡಿರುವ ಇವರು ಅಸಹಾಯಕರಿಗೆ ಸಹಾಯಹಸ್ತ ಚಾಚುತ್ತಾ, ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾ ನೆರವಾಗುತ್ತಿದ್ದಾರೆ. ಇಂತಹ ಹಿರಿಯರು ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ ಎಂದು ಅಭಿನoದಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಟಿ.ಎಲ್.ಕುಂಭಯ್ಯನವರು ಈ ಸಮಾಜದ ದೊಡ್ಡ ಶಕ್ತಿ, ತಮ್ಮ ಸಜ್ಜನಿಕೆ, ಸನ್ನಡತೆಯಿಂದ ಜಿಲ್ಲೆಯಾದ್ಯಂತ ಜನರ ಪ್ರೀತಿ ಗಳಿಸಿದ್ದಾರೆ. ಒಳ್ಳೆಯ ದಾರಿಯಲ್ಲಿ ಸಾಗಿ, ಜೀವನವನ್ನು ಉತ್ತಮ ಪಡಿಸಿಕೊಂಡು ಬಾಳಿದರೆ ಎಲ್ಲರೂ ಗೌರವಿಸುವ ಆದರ್ಶ ವ್ಯಕ್ತಿಯಾಗಬಹುದು ಎಂಬುದಕ್ಕೆ ಕುಂಭಯ್ಯನವರು ನಮ್ಮ ಮುಂದಿರುವ ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ ಎಂದರು.

ತಿಗಳ ಸಮಾಜದ ಯಜಮಾನರುಗಳಾದ ಗಂಗಹನುಮಯ್ಯ, ಹನುಮಂತರಾಜು, ಟಿ.ಹೆಚ್.ಜಯರಾಮ್, ಕುಮಾರಣ್ಣ, ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಮಾಜಿ ಸದಸ್ಯರಾದ ಎ.ಶ್ರೀನಿವಾಸ್,ಟಿ.ಹೆಚ್.ವಾಸುದೇವ್, ರಾಮಕೃಷ್ಣಪ್ಪ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ನೇತಾಜಿ ಶ್ರೀಧರ್,ಮುಖಂಡರಾದ ರವೀಶ್ ಜಹಂಗೀರ್, ಗoಗಣ್ಣ, ಟಿ.ಎನ್.ಶಿವಣ್ಣ ಸೇರಿದಂತೆ ಸಮಾಜದ ವಿವಿಧ ಮುಖಂಡರು ಭಾಗವಹಿಸಿದ್ದರು.

——————–ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?