ಹೊಳೆನರಸೀಪುರ:ತಾಲ್ಲೂಕಿನ ಹಳೇಕೋಟೆ ಹೋಬಳಿಯ ಹಂಗರಹಳ್ಳಿ ಸರ್ಕಾರೀ ಶಾಲೆ ಅತ್ಯುತ್ತಮ ಶಾಲೆ ಎನಿಸಿಕೊಂಡಿದೆ.ಈ ಶಾಲೆಗೆ ಇಂತಹ ಉನ್ನತ ಸ್ಥಾನ ದೊರಕಲು ಈ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಉದ್ಯಮಿ ಎನ್.ಆರ್. ಅನಂತ್ ಕುಮಾರ್ ಹಾಗು ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಈ ಶಾಲೆಯ ಶಿಕ್ಷಕರು ಕಾರಣರಾಗಿದ್ದರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ತಿಳಿಸಿದರು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತ,ಈ ಶಾಲೆಯಲ್ಲಿ ಎಲ್.ಕೆ.ಜಿಯಿಂದ 7 ನೇ ತರಗತಿ ವರೆಗೆ ಇದ್ದು ಈ ಶಾಲೆಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ.ಈ ಶಾಲೆಯಲ್ಲಿ ಸುತ್ತಲ ಗ್ರಾಮೀಣ ಪ್ರದೇಶದ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಅವರೆಲ್ಲರಿಗೂ ಉತ್ತಮ ಸೌಲಭ್ಯವನ್ನು ಒದಗಿಸಿಕೊಟಿದ್ದಾರೆ. ಕೆಲವು ಶಿಕ್ಷಕರಿಗೆ ಅನಂತ್ ಕುಮಾರ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ವೇತನ ನೀಡುತ್ತಿದ್ದಾರೆ. ಉತ್ತಮ ಆಟಿಕೆಗಳು, ಇಲ್ಲಿನ ವ್ಯವಸ್ಥೆ, ಶಿಕ್ಷಕರು ಪಾಠಪ್ರವಚನ ಮಾಡುವ ರೀತಿಗೆ ಸುತ್ತಲ ಜನರು ಮೆಚ್ಚಿದ್ದಾರೆ. ಈ ಶಾಲೆಯಲ್ಲೂ 5 ನೇ ತರಗತಿಯಿಂದ ಇಂಗ್ಲೀಷ್ ಮೀಡಿಯಂ ಪ್ರಾರಂಭವಾಗಿದೆ. ಇಲ್ಲಿ ಹಿಂದಿ ಭಾಷೆಯನ್ನೂ ಚೆನ್ನಾಗಿ ಕಲಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎನ್.ಆರ್. ಅನಂತ್ ಕುಮಾರ್ ಅವರನ್ನು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಶಿಕ್ಷಣ ಇಲಾಖೆಯ ಅಧಿಕಾರಿ ಕೇಶವ, ಮುಖ್ಯಶಿಕ್ಷಕ ಮೋಹನ್ ಕುಮಾರ್ ಸನ್ಮಾನಿಸಿದರು. ಶಾಲಾಭಿವೃದ್ಧಿ ಸಮಿತಿಯ ರಾಮು. ಲಕ್ಷ್ಮಣ, ರಂಗೇಗೌಡರು, ಚೆನ್ನಕೇಶವ ಇತರರು ಭಾಗವಹಿಸಿದ್ದರು
——————--ಸುಕುಮಾರ್