ಹೊಳೆನರಸೀಪುರ:ನಮ್ಮ ಬದುಕಿಗೆ ಅತ್ಯವಶ್ಯಕವಾಗಿ ಬೇಕಾದ ನೀರು, ಗಾಳಿ, ಬೆಳಕನ್ನು ಭಗವಂತ ನಮಗೆ ಉಚಿತವಾಗಿ ನೀಡುತ್ತಿದ್ದಾರೆ. ಇವುಗಳನ್ನು ಕಲುಷಿತಗೊಳಿಸಿದೆ, ವ್ಯರ್ಥಮಾಡದೆ ಅತ್ಯಂತ ಅಮೂಲ್ಯ ಎನ್ನುವ ಭಾವನೆಯಿಂದ ಬಳಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ್ ಮನವಿ ಮಾಡಿದರು.
ತಾಲ್ಲೂಕಿನ ದೊಡ್ಡಕುಂಚೇವು ನವೋದಯ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಶುದ್ಧ ಜಲ ಅಭಿಯಾನ, ನೀರಿನ ಮಹತ್ವ ವಿವರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮೂಲ್ಯ ವಸ್ತಗಳ ರಕ್ಷಣೆ ಮಾಡಿ ಪರಿಸರವನ್ನು ಕಾಪಾಡಿಕೊಂಡರೆ ಮುಂದಿನ ನಮ್ಮ ಜನಾಂಗಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಇಂತಹ ಜವಾಬ್ದಾರಿಯನ್ನು ನಾವೆಲ್ಲಾ ನಿರ್ವಹಿಸೋಣ ಎಂದರು.
ಶಾಲೆಯ ವಿದ್ಯಾರ್ಥಿಗಳು ಈ ಬಗ್ಗೆ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿದರು. ಯೋಜನಾಧಿಕಾರಿ ಕೆ. ಪ್ರಸಾದ್, ಮುಖ್ಯಶಿಕ್ಷಕ ಮಂಜಪ್ಪ, ಪ್ರಾಂಶುಪಾಲೆ ಸುಮಲತಾ, ಡಾ. ಭುವನೇಶ್ವರ್, ಎಸ್.ಡಿ.ಎಂ,ಸಿ ಅಧ್ಯಕ್ಷರಾದ ಜವರಪ್ಪ ಭಾಗವಹಿಸಿದ್ದರು.
————–-ಸುಕುಮಾರ್