ತುಮಕೂರು:ವೀರಶೈವ ಸಹಕಾರ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಕೆ.ಜೆ. ರುದ್ರಪ್ಪ,ಉಪಾಧ್ಯಕ್ಷರಾಗಿ ಕೆ.ಮಲ್ಲಿಕಾರ್ಜುನಯ್ಯ ಅವಿರೋಧ ಆಯ್ಕೆ

ತುಮಕೂರು:ತುಮಕೂರು ವೀರಶೈವ ಸಹಕಾರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ 2025-30ರ ಅವಧಿಗೆ ಕೆ.ಜೆ.ರುದ್ರಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಮಲ್ಲಿಕಾರ್ಜುನಯ್ಯ ಅವರು ಮತ್ತೊಂದು ಅವಧಿಗೆ ಅವಿರೋಧವಾಗಿ ಆಯ್ಕೆಯಾದರು.

ಗುರುವಾರ ಬ್ಯಾಂಕಿನಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಜೆ.ರುದ್ರಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಮಲ್ಲಿಕಾರ್ಜುನಯ್ಯ ಅವರು ಮಾತ್ರವೇ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ರಿಟರ್ನಿoಗ್ ಅಧಿಕಾರಿಯಾಗಿ ಚುನಾವಣೆ ಕಾರ್ಯ ನಿರ್ವಹಿಸಿದ ಸಹಕಾರ ಸಂಘಗಳ ಉಪ ನಿಬಂಧಕ ಹೆಚ್.ಓಬಳೇಶ್ ಅವರು ಎರಡೂ ಸ್ಥಾನಗಳಿಗೆ ಇವರ ಅವಿರೋಧ ಆಯ್ಕೆ ಘೋಷಿಸಿದರು.

ಹಿಂದಿನ ಅವಧಿಯಲ್ಲೂ ಕೆ.ಜೆ.ರುದ್ರಪ್ಪ ಹಾಗೂ ಕೆ.ಮಲ್ಲಿಕಾರ್ಜುನಯ್ಯ ಅವರು ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿ ನಡೆದ ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಗರ ವೀರಶೈವ ಸಮಾಜ ಅನುಮೋದಿಸಿದ್ದ ಇವರ ತಂಡದ ಎಲ್ಲಾ ನಿರ್ದೇಶಕರು ಚುನಾಯಿತರಾಗಿದ್ದರು.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕೆ.ಜೆ.ರುದ್ರಪ್ಪ ಅವರು ಮಾತನಾಡಿ, ಕಳೆದ ಅವಧಿಯಲ್ಲಿ ತಾವು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬ್ಯಾಂಕ್ ಸುಮಾರು 17 ಕೋಟಿ ರೂ. ನಷ್ಟು ನಷ್ಟದಲ್ಲಿತ್ತು, ಆ ನಷ್ಟವನ್ನು ಸರಿತೂಗಿಸಿ,ಈಗ ಬ್ಯಾಂಕ್ ಲಾಭದಲ್ಲಿದೆ. ಶೂನ್ಯ ಎನ್.ಪಿ.ಎ.ಗಳಿಸಿದೆ. ಆರ್ಥಿಕವಾಗಿ ಸದೃಢವಾಗಿದೆ.ಈ ಭಾರಿ ಸದಸ್ಯರುಗಳಿಗೆ ಲಾಭಾಂಶ ವಿತರಿಸಿದ್ದೇವೆ, ಸದಸ್ಯರು ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಈ ವರ್ಷಕ್ಕೆ ಬ್ಯಾಂಕ್ ಆಗಿ 47 ವರ್ಷಗಳಾಗಿವೆ, ಹಂತಹoತವಾಗಿ ಬೆಳವಣಿಗೆ ಕಾಣುತ್ತಿದೆ. ಬ್ಯಾಂಕಿನ ವ್ಯವಹಾರವನ್ನು ಆಧುನಿಕರಣ ಮಾಡುವ ಸಲುವಾಗಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡು ಸದಸ್ಯರಿಗೆ ಹೆಚ್ಚಿನ ಸೇವೆ ಒದಗಿಸುವ ಗುರಿ ಹೊಂದಲಾಗಿದೆ.ನೆಲಮoಗಲ ಹಾಗೂ ಬೆಂಗಳೂರು ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಪ್ರಯತ್ನ ಮಾಡಲಾಗು ವುದು ಎಂದು ಹೇಳಿದರು.

ಬ್ಯಾಂಕಿನ ಉಪಾಧ್ಯಕ್ಷ ಕೆ.ಮಲ್ಲಿಕಾರ್ಜುನಯ್ಯ ಮಾತನಾಡಿ, ನಗರ ವೀರಶೈವ ಸಮಾಜದ ಮುಖಂಡರ ಸಹಕಾರದಿಂದ ಬ್ಯಾಂಕಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆ ಸಾಧ್ಯವಾಗಿದೆ. ಬ್ಯಾಂಕ್ ಮತ್ತಷ್ಟು ಬೆಳವಣಿಗೆಯಾಗಿ ಹೆಚ್ಚು ಜನರಿಗೆ ಬ್ಯಾಂಕಿನ ಪ್ರಯೋಜನ ದೊರಕಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಬ್ಯಾಂಕಿನ ನಿರ್ದೇಶಕರಾದ ಟಿ.ಜೆ.ಗಿರೀಶ್, ಟಿ.ಎಲ್.ಏಕಾಂತ್, ಆರ್.ಮಂಜುನಾಥ್,ಟಿ.ಆರ್.ಯೋಗೇಶ್, ಪಿ.ರವಿಶಂಕರ್, ಟಿ.ಎಸ್.ಷಣ್ಮುಖ ಸ್ವಾಮಿ, ಬಿ.ರೇಣುಕಾರಾಧ್ಯ,ಟಿ.ವಿ.ಚಂದ್ರಶೇಖರ್, ಇ.ಎಸ್.ಸಂತೋಷ್‌ಕುಮಾರ್, ಜಿ.ನಾಗರಾಜ್, ಟಿ.ಎನ್.ಶ್ರೀಕಂಠಸ್ವಾಮಿ,ಟಿ.ಎo.ಸoತೋಷ್, ಕೆ.ಎಸ್.ಅರುಣ್‌ಕುಮಾರ್, ಅರ್ಜುನ್ ಎಂ.ವೀರೇಶ್, ಗಣೇಶ್ ಜಿ.ಪ್ರಸಾದ್,ಹೆಚ್.ಎಂ.ದೀಪಶ್ರೀ, ಎ.ಯು.ರೂಪ, ಬಾಂಕಿನ ಮುಖ್ಯ ಕಾರ್ಯನಿ ರ್ವಹಣಾಧಿಕಾರಿ ಬಿ.ಎಸ್.ಕಲ್ಪನ, ಅಧಿಕೃತ ಅಧಿಕಾರಿ ಎಂ.ಆರ್.ತಿಪ್ಪೇಸ್ವಾಮಿ ಅವರು ಹಾಜರಿದ್ದು ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ತುಮಕೂರು ವೀರಶೈವ ಸಮಾಜ,ಸ್ನೇಹಸಂಗಮ ಪತ್ತಿನ ಸಹಕಾರ ನಿ,ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾ ಜಯ್ಯ,ಮಾಜಿ ಅಧ್ಯಕ್ಷ ಜೆ.ಕೆ.ಅನಿಲ್,ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು,ಜಯನಗರ ಪತ್ತಿನ ಸಹಕಾರ ಸಂಘ(ನಿ)ದ ಅಧ್ಯಕ್ಷರಾದ ಆರ್.ಎಸ್.ವೀರಪ್ಪದೇವರು ಮುಂತಾದವರು ಅಭಿನoದಿಸಿದರು.

—————-–ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?