ಕೊರಟಗೆರೆ-ಗಡಿನಾಡು ಪ್ರತಿಕೆಯ ಸಂಪಾದಕ ರಾಮಾಂಜನಪ್ಪನ ಮೇಲೆ ಕೆಲ ಮಹಿಳೆಯರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆಯನ್ನು ಕೊರಟಗೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘ ಖಂಡಿಸಿ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಮಂಜುನಾಥ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್,ರಿಯಲ್ ಎಸ್ಟೇಟ್ ಏಜೆಂಟ್ ಅಪ್ಪಾಜಿಹಳ್ಳಿ ನಾರಾಯರೆಡ್ಡಿ ಅನೈತಿಕ ಚಟುವಟಿಕೆ ನೆಡೆಸುತ್ತಿದ್ದ ಸಮಯದಲ್ಲಿ ಪೊಲೀಸರು ದಾಳಿಮಾಡಿ ಠಾಣೆಗೆ ಕರೆದೊಯ್ಯುವಾಗ ಗಡಿನಾಡು ನ್ಯೂಸ್ ಯೂಟ್ಯೂಬ್ ಚಾನಲ್ನಲ್ಲಿ ರಾಮಾಂಜನಪ್ಪ ಲೈವ್ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಟೋಲ್ ಗೇಟ್ ವೃತ್ತದ ಬಳಿ ಸಾರ್ವಜನಿಕವಾಗಿ ನಾರಾಯಣರೆಡ್ಡಿ ಪತ್ನಿ ಸೇರಿದಂತೆ ಇನ್ನಿತರ ಸಂಬಂದಿ ಮಹಿಳೆಯರು ರಾಮಾಂಜನಪ್ಪ ನ ಮೇಲೆ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅವಮಾನ ಮಾಡಿದ್ದಾರೆ.
ಪತ್ರಕರ್ತ ಸಮಾಜದ ಅನ್ಯಾಯಗಳನ್ನು ಹೊರಗೆ ಎಳೆಯಲು ಹೋದ ಸಂದರ್ಭದಲ್ಲಿ ಅದನ್ನೇ ಗುರಿಯಾಗಿ ಮಾಡಿಕೊಂಡು ಹಲ್ಲೆ ನಡೆಸಿರುವುದು ತೀವ್ರ ಅವಮಾನಕರ ಸಂಗತಿ.ಯಾರೇ ಅಗಿರಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಅವರನ್ನು ಬಂದಿಸಿ ಕಠಿಣ ಶಿಕ್ಷೆ ನಿಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಯಾವೊಬ್ಬ ಪತ್ರಕರ್ತರಿಗೆ ಈ ರೀತಿಯ ಘಟನೆ ನಡೆಯದಂತೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿದರು.
ಮಾಜಿ ಅಧ್ಯಕ್ಷ ಹಾಗೂ ಪತ್ರಕರ್ತ ಸೊಗಡು ಶ್ರೀನಿವಾಸ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಕಾ ರಂಗ ಅತಿ ಮುಖ್ಯವಾಗಿದ್ದು ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸಿರುವುದು ಖಂಡನೀಯ. ಪಾವಗಡ ಗಡಿನಾಡು ಮಿತ್ರ ಪತ್ರಿಕೆ ಸಂಪಾದಕ ರಾಮಾಂಜನಪ್ಪನ ಮೇಲೆ ಹಲ್ಲೆ ನಡೆಸಿದ ನಾರಾಯಣರೆಡ್ಡಿ ಸೇರಿದಂತೆ ರೂಪ,ಲಕ್ಷ್ಮಿದೇವಿ,ಆದಿಲಕ್ಷ್ಮಿ ಎಂಬ ಮಹಿಳೆಯರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತ ಎನ್.ಪದ್ಮನಾಭ್, ತಾಲೂಕು ಸಂಘದ ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಚಿದಂಭರ, ಜಿಲ್ಲಾ ಸಂಘದ ಕಾರ್ಯದರ್ಶಿ ರಂಗಧಾಮಯ್ಯ, ನಿರ್ದೇಶಕ ಎನ್.ಮೂರ್ತಿ, ಪದಾದಿಕಾರಿಗಳಾದ ಕೆ.ಬಿ.ಲೋಕೇಶ್, ದೇವರಾಜು, ಸತೀಶ್, ವಿಜಯ್, ಮಂಜುನಾಥ್, ನವೀನ್ಕುಮಾರ್, ಲಕ್ಷ್ಮೀಶ, ತೋವಿನಕೆರೆ ನಾಗೇಂದ್ರ, ಲಕ್ಷ್ಮಿಕಾಂತ, ನರಸಿಂಹಮೂರ್ತಿ, ಸತೀಶ, ಬಾಬುನಾಯ್ಕ್, ಅರವಿಂದ್, ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು.
—————-–ಶ್ರೀನಿವಾಸ್ ಕೊರಟಗೆರೆ