ಕೆ.ಆರ್.ಪೇಟೆ-ಶ್ರೀ ಛಾಯಾದೇವಿ-ಬಾನು ಪ್ರಕಾಶ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಆಹಾರ ಮೇಳ-ಉತ್ತಮ ಬೆಳವಣಿಗೆ ಎಂದ ಕೆ.ಪಿ.ಬೋರೇಗೌಡ

ಕೆ.ಆರ್.ಪೇಟೆ-ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಳಿಕೆಗಳಾದ ಸಾಂಸ್ಕೃತಿಕ ಹಾಗೂ ಆಟೋಟಗಳನ್ನು ಕಲಿಸುವ ಜೊತೆಯಲ್ಲಿ ಇತ್ತೀಚೆಗೆ ವ್ಯಾವಹಾರಿಕ ಜ್ಞಾನದ ಅರಿವು ಮೂಡಿಸಲು ಮಕ್ಕಳ ಸಂತೆ ಎಂಬ ವಿನೂತನ ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆಗಳು ಆಯೋಜನೆ ಮಾಡುತ್ತಿದ್ದು, ಅದೇ ಮಾಧರಿಯಲ್ಲಿ ಪೋಷಕರಿಗಾಗಿ ಆಹಾರ ಮೇಳವನ್ನು ಕೆಲ ವಿದ್ಯಾ ಸಂಸ್ಥೆಗಳ ಆಯೋಜನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಪಿ.ಬೋರೇಗೌಡ ಅಭಿಪ್ರಾಯಪಟ್ಟರು.

ಅವರು ಕೆ.ಆರ್.ಪೇಟೆ ಪಟ್ಟಣದ ಹೊರಹೊಲಯದ ಪುರ ಗೇಟ್ ಬಳಿ ಇರುವ ಶ್ರೀ ಛಾಯಾದೇವಿ ಹಾಗೂ ಬಾನು ಪ್ರಕಾಶ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಿಗಾಗಿ ಆಯೋಜಿಸಲಾಗಿದ್ದ ಆಹಾರ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರವು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸಾಧನೆಯನ್ನು ಮಾಡುವ ಮೂಲಕ ಪೋಷಕರು ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಗೌರವವನ್ನು ತಂದು ಕೊಡುವ ನಿಟ್ಟಿನಲ್ಲಿ ಸಾಧನೆ ಮಾಡಬೇಕು. ಹಿಂದೆ ಕನಿಷ್ಠ ಸೌಲಭ್ಯಗಳು ಇಲ್ಲದ ಸಂದರ್ಭದಲ್ಲಿ ವ್ಯಾಸಂಗ ಮಾಡಿದ್ದೇವೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳ ಮಟ್ಟದಲ್ಲಿ ಪೈಪೋಟಿಗಿಳಿದು ವ್ಯಾಸಂಗ ಮಾಡುತ್ತಿವೆ. ಸರ್ಕಾರಿ ನೌಕರಿ ದೊರಕುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಮೀಸಲಾತಿಯೂ ಕೂಡ ದೊರಕಲಿದೆ. ಇಂದು ಎಲ್ಲಾ ರೀತಿಯ ಸೌಲಭ್ಯಗಳು ದೊರಕುತ್ತಿವೆ. ಅದರ ಸದುಪಯೋಗವನ್ನು ಇಂದಿನ ಮಕ್ಕಳು ಹಾಗೂ ಪೋಷಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಛಾಯಾ ಸಂಸ್ಥೆಯು ಸುಸಜ್ಜಿತವಾದ ಕಟ್ಟಡದಲ್ಲಿ ಉತ್ತಮ ವಾತಾವರಣದಲ್ಲಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶವನ್ನು ಸಹ ಪಡೆದುಕೊಳ್ಳುತ್ತಿದೆ. ಇಂದು ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಿಗಾಗಿ ವಿನೂತನ ಆಹಾರ ಮೇಳವನ್ನು ಆಯೋಜನೆ ಮಾಡುವ ಮೂಲಕ ಸಾರ್ವಜನಿಕ ಮೆಚ್ಚುಗೆಗೆ ಸಂಸ್ಥೆಯು ಪಾತ್ರವಾಗಿದೆ ಎಂದು ಹೇಳಿದರು.

ಇಡೀ ಶಾಲೆಯ ವಾತಾವರಣ ಹಬ್ಬದ ರೀತಿಯಲ್ಲಿ ಸಿಂಗಾರಗೊoಡಿತ್ತು. ಪಾನೀಪೂರಿ, ಪಾವ್‌ಭಾಜಿ,ಕಟ್ಲೇಟ್, ಜೀನಿ, ಗಿಣ್ಣು, ರೋಟ್ಟಿ, ಸಿರಿಧಾನ್ಯಗಳನ್ನು ಬಳಸಿ ವಿವಿಧ ಆಹಾರಗಳನ್ನು ತಯಾರಿಸುವ ಸುಮಾರು 50 ಸ್ಟಾಲ್‌ಗಳನ್ನು ಹಾಕಲಾಗಿತ್ತು.

ತೀರ್ಪುಗಾರರಾಗಿ ಫಾಸ್ಟ್ಪುಡ್ ಸಂಘದ ಪದಾಧಿಕಾರಿಗಳಾದ ರವಿ, ಸುರೇಶ್, ಸ್ವಾಮಿ, ರಕ್ಷಿತ್ ಭಾಗವಹಿಸಿದ್ದರು. ರುಚಿ, ಶುಚಿ ಹಾಗೂ ಆಕರ್ಷಕ ಎಂಬ ಮೂರು ರೀತಿಯ ಪ್ರಥಮ, ದ್ವೀತಿಯ ಬಹುಮಾನಗಳನ್ನು ನೀಡಲಾಯಿತು.

ಸಂಸ್ಥೆಯ ಆಡಳಿತಾಧಿಕಾರಿ ಸಾಹಿತಿ ಸವಿತ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್, ಪತ್ರಕರ್ತರ ಖಲೀಲ್ ಅಹಮದ್, ಸಂಸ್ಥೆಯ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

——————ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?