ಕೆ.ಆರ್.ಪೇಟೆ-ಮೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ

ಕೆ.ಆರ್.ಪೇಟೆ-ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮೋದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಮಕ್ಕಳು ವ್ಯಾಪಾರ ಮಾಡಿ, ವ್ಯವಹಾರ ಜ್ಞಾನ ಬೆಳೆಸಿಕೊಂಡರು. ಅಕ್ಕಾ ಬನ್ನಿ, ಅಣ್ಣಾ ಬನ್ನಿ ತಾಜಾ ತರಕಾರಿ, ತಗೊಳಿ, ತಾಜಾ ತಾಜಾ ತಂಪು ಪಾನೀಯ, ಸೌತೆಕಾಯಿ, ತರಕಾರಿ, ಪಾನಿಪುರಿ, ಚುರುಮುರಿ, ಹಣ್ಣುಗಳನ್ನು ತಗೊಳ್ಳಿ ಸಾರ್, ಇಲ್ಲಿ ಬನ್ನಿ ನಮ್ಮಲ್ಲಿ ಬೆಲೆ ತುಂಬಾ ಕಡಿಮೆ ತಗೊಳ್ಳಿ… ಎಂದು ಕೂಗುತ್ತಿದ್ದ ಶಾಲಾ ಮಕ್ಕಳು ಪೋಷಕರ ಸಹಕಾರದಿಂದ ತಾವು ತಂದಿದ್ದ ತರಕಾರಿ, ಹೂವು, ಹಣ್ಣುಗಳನ್ನು ಮಾರಾಟ ಮಾಡಿ ವ್ಯವಹಾರ ಜಾಣ್ಮೆ ಪ್ರದರ್ಶನ ಮಾಡಿದರು.

ಶಾಲಾ ಮಕ್ಕಳ ಸಂತೆಯಲ್ಲಿ ತರಕಾರಿ, ಸೌತೆಕಾಯಿ, ಹಣ್ಣು ಹಂಪಲು, ಕರಿಬೇವು, ಕೊತ್ತಂಬರಿ ಸೇರಿದಂತೆ ವಿವಿಧ ತಿಂಡಿ-ತಿನಿಸು, ತರ-ತರಹದ ಸೊಪ್ಪು ಏನುಂಟು ಏನಿಲ್ಲಾ., ವಿದ್ಯಾರ್ಥಿಗಳು ಸಂತೆಗೆ ಬಂದ ಗ್ರಾಹಕರು ಮತ್ತು ಪೋಷಕರನ್ನು ಸೆಳೆಯುವುದು, ಮನವರಿಕೆ ಮಾಡುವುದು, ಚೌಕಾಸಿ ಮಾಡುವುದು, ತಕ್ಕಡಿ ನಿರ್ವಹಣೆ, ಚಿಲ್ಲರೆ ವಿನಿಮಯ ಸ್ವಚ್ಛತೆಯ ಪರಿಕಲ್ಪನೆ ಬಗ್ಗೆ ಜಾಗೃತಿ ಮೂಡಿಸಿ, ತರಕಾರಿ ಒಯ್ಯಲು ಪರಿಸರ ಸ್ನೇಹಿ ಚೀಲಗಳನ್ನು ಉಚಿತವಾಗಿ ನೀಡಿದರು. ಒಟ್ಟಾರೆ ಮೋದೂರಿನಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಾರಾಟದ ಮುಟ್ಟುವಂತಿತ್ತು.

ಕಾರ್ಯಕ್ರಮಕ್ಕೆ ಮಕ್ಕಳಿಂದ ವಿದ್ಯಾರ್ಥಿಗಳಿಂದ ಖರೀದಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಮುಖ್ಯ ಶಿಕ್ಷಕ ಎಸ್.ಜೆ.ಕೃಷ್ಣ ಅವರು,ಮಕ್ಕಳು ಪಠ್ಯ ಪುಸ್ತಕದ ಜೊತೆಗೆ ವ್ಯವಹಾರ, ವ್ಯಾಪಾರದ ಜಾಣ್ಮೆಯನ್ನು ಬೆಳೆಸಿಕೊಳ್ಳಲು ಮಕ್ಕಳ ಸಂತೆ ಕಾರ್ಯಕ್ರಮ ಸಹಕಾರಿಯಾಗುತ್ತದೆ. ವ್ಯವಹಾರಿಕ ಜ್ಞಾನವನ್ನು ತಿಳಿಸಲು, ಶಿಕ್ಷಣದ ಜೊತೆ ವ್ಯಾವಹಾರಿಕ ಜ್ಞಾನ ಬೆಳೆಯಬೇಕು. ನಾಲ್ಕು ಗೋಡೆ ನಡುವಿನ ಶಿಕ್ಷಣ ಮಾನಸಿಕವಾಗಿ ಮಕ್ಕಳನ್ನು ಸಜ್ಜುಗೊಳಿಸಿದರೆ, ಹೊರಗಿನ ಶಿಕ್ಷಣ ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಸಜ್ಜುಗೊಳಿಸುತ್ತದೆ ಎಂದು ತಿಳಿಸಲೆಂದು ಪ್ರತಿ ವರ್ಷ ಇಂತಹ ವಿನೂತನ ಮಾದರಿಯಾದ ಕಾರ್ಯಕ್ರಮಗಳನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಶಾಲಾ ಮುಖ್ಯ ಶಿಕ್ಷಕರಾದ ಎಸ್ ಜೆ ಕೃಷ್ಣಸಹ ಶಿಕ್ಷಕರುಗಳಾದ ವಿ ಜಿ ಮಲ್ಲಿಕಾರ್ಜುನಸ್ವಾಮಿ, ಕೆ ಎಚ್ ನಾಗರಾಜು, ಸಿ ರಾಧಾ, ಮಹೇಶ್‌ಕುಮಾರ್, ಬಿ.ಎನ್.ರಾಘವೇಂದ್ರ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.

——————-—ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?