ಚಿಕ್ಕಮಗಳೂರು-ಜ,14 ರಂದು ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯದಿಂದ ನೇರ ಪ್ರಸಾರ

ಚಿಕ್ಕಮಗಳೂರು-ನಗರದ ಅಯ್ಯಪ್ಪನಗರ ದುರ್ಗಾ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಜನವರಿ 14 ರ ಮಕರ ಸಂಕ್ರಾoತಿ ದಿನದಂದು ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರವನ್ನು ದೊಡ್ಡ ಎಲ್‌ಯಿಡಿ ಸ್ಕ್ರೀನ್ ಮೇಲೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿ.ಎಂ.ಸoದೀಪ್ ತಿಳಿಸಿದ್ದಾರೆ.

ಅವರು ಇಂದು ಪತ್ರಿಕಾ ಹೇಳಿಕೆಯಲ್ಲಿ ,ಅಂದು ಮಕರ ಸಂಕ್ರಾoತಿ ದಿನ ಬೆಳಿಗ್ಗೆ ಅಯ್ಯಪ್ಪಸ್ವಾಮಿಗೆ ಅಭಿಷೇಕ, ಸಂಜೆ 6 ಗಂಟೆಗೆ ಪಡಿ ಪೂಜೆ, ಜ್ಯೋತಿ ದರ್ಶನದ ನೇರ ಪ್ರಸಾರವನ್ನು ದೊಡ್ಡ ಎಲ್‌ಇಡಿ ಸ್ಕ್ರೀನ್ ಮೇಲೆ ವೀಕ್ಷಿಸಬಹುದಾಗಿದೆ. ಅಯ್ಯಪ್ಪನಗರದ ಸನ್ನಿಧಾನದಲ್ಲಿ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ. ಈ ಕಾರ್ಯಕ್ರಮಕ್ಕೆ ಸಮಸ್ತ ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

× How can I help you?