ರಾಮನಾಥಪುರ-ಕೋಟವಾಳು ಗ್ರಾಮದಲ್ಲಿರುವ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರಿನ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ (ರಿ) ಕರಾಟೆ ಸಂಸ್ಥೆಯು ಆಯೋಜನೆ ಮಾಡಿದ್ದ “ಬೆಂಗಳೂರು ಮುಕ್ತ ಕರಾಟೆ ಪಂದ್ಯಾವಳಿ”ಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಈ ಮೂಲಕ ವಿದ್ಯಾನಿಕೇತನ ವಿದ್ಯಾ ಸಂಸ್ಥೆಗೆ,ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಿರುಪಾಕ್ಷ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ಯದರ್ಶಿ ಬಸವರಾಜ್ ,ಉಪಾಧ್ಯಕ್ಷ ಉದಯ್,ಶಾಲಾ ಮುಖ್ಯ ಶಿಕ್ಷಕರಾದ ರಾಜಣ್ಣ,ಕರಾಟೆ ಶಿಕ್ಷಕರಾದ ಪೃಥ್ವಿರಾಜ್ ಹಾಗೂ ಶಿಕ್ಷಕ ವೃಂದದ ವರು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
———-—ಶಶಿಕುಮಾರ್ ಕೆಲ್ಲೂರು