ಮೂಡಿಗೆರೆ:ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಗರ ಒಕ್ಕೂಟದಿಂದ ಸಂಕ್ರಾoತಿ ಹಬ್ಬದ ಪ್ರಯುಕ್ತ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಒಕ್ಕೂಟದ ಪದಾಧಿಕಾರಿಗಳಿಂದ ಸ್ವಚ್ಛತಾ ಕಾರ್ಯ ನಡೆ ಸಲಾಯಿತು.
ಈ ಸಂಧರ್ಭದಲ್ಲಿ ಸೇವಾ ಪ್ರತಿನಿಧಿ ಮಧು ಮಾತನಾಡಿ, ಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸುವ ಸಲುವಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಗರ ಒಕ್ಕೂಟದಿಂದ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪ್ರತಿ ಹಬ್ಬದ ದಿನದಲ್ಲೂ ಪ್ರಾರ್ಥನಾ ಮಂದಿರಗಳು ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಹಬ್ಬವನ್ನು ಆಚರಿಸುವ ಸಂಪ್ರದಾಯವಿಟ್ಟುಕೊoಡಿದ್ದೇವೆ. ಎಲ್ಲಾ ಸಂಘ ಸoಸ್ಥೆಗಳು ಇಂತಹ ಕೆಲಸಕ್ಕೆ ಕೈಜೋಡಿಸಿದರೆ ಹಬ್ಬ ಆಚರಿಸುವುದು ಅರ್ಥಗರ್ಭಿತವಾಗುತ್ತದೆ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷೆ ಅನ್ನಪೂರ್ಣ ಮಾತನಾಡಿ, ಸ್ವಚ್ಛತಾ ಕಾರ್ಯ ನಡೆಸುವುದರಿಂದ ಸಂಘ-ಸoಸ್ಥೆಗಳ ಪದಾಧಿಕಾರಿಗಳಿಗೆ ಆತ್ಮ ಸಂತೋಷ ಸಿಗುವ ಜೊತೆಗೆ ಪಟ್ಟಣವನ್ನು ಸುಂದರಗೊಳಿಸಲು ಸಾದ್ಯವಾಗುತ್ತದೆ.ಇದರಿಂದ ಸಾರ್ವಜನಿಕರ ಆರೋಗ್ಯದ ಕಡೆಗೂ ಗಮನ ಹರಿಸಿ ದಂತಾಗುತ್ತದೆ. ಇಂತಹ ಸಮಾಜಸೇವಾ ಕಾರ್ಯಕ್ಕೆ ಸಂಘ-ಸoಸ್ಥೆಗಳು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಒಕ್ಕೂಟದ ನರಸಿಂಹ ಟೈಲರ್, ಮಾಜಿ ಪ.ಪಂ.ಉಪಾಧ್ಯಕ್ಷ ಟಿ.ಎ.ಮದೀಶ್,ವಿಜಯಕುಮಾರ್, ಪೂರ್ಣೇಶ್, ಮತ್ತಿತರರಿದ್ದರು.
ವರದಿ:ವಿಜಯಕುಮಾರ್.ಟಿ.ಮೂಡಿಗೆರೆ