ಕೊಟ್ಟಿಗೆಹಾರ-ಸಮಾಜ ಸೇವಕ ಸ್ನೇಕ್ ಆರಿಫ್ ಅವರಿಗೆ ಹಾವುಗಳನ್ನು ಸಂರಕ್ಷಣೆ ಮಾಡಲು ಸುರಕ್ಷತೆ ದೃಷ್ಟಿಯಿಂದ ಚೇತನ್ ಅತ್ತಿಗೆರೆ ರವರು ಶೂ ಹಾಗೂ ಕೈ ಕವಚಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಮಲೆನಾಡಿನಲ್ಲಿ ಮನೆ ಹಾಗೂ ತೋಟಗಳಲ್ಲಿ ಹಾವುಗಳು ಕಂಡರೆ ಆರಿಫ್ ಅವರಿಗೆ ಕರೆ ಮಾಡುತ್ತಾರೆ. ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಧಾವಿಸುವ ಆರಿಫ್ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುತ್ತಾರೆ. ಈ ಕಾಯಕಕ್ಕೆ ಆರೀಫ್ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುತ್ತಿರಲಿಲ್ಲ. ಹಾಗಾಗಿ ದಾನಿಗಳಾದ ಚೇತನ್ ರವರು ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಶೂ ಹಾಗೂ ಕೈ ಕವಚಗಳನ್ನು ಬೆಂಗಳೂರಿನಿಂದ ಕಳಿಸಿ ಕೊಟ್ಟಿದ್ದು, ತನ್ನ ಸ್ನೇಹಿತ ಸಂಜಯ್ ಕೊಟ್ಟಿಗೆಹಾರ ರವರ ಮೂಲಕ ಆರೀಫ್ ಗೆ ತಲುಪುವಂತೆ ನೋಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪ್ರದೀಪ್ ರಾಜ್ , ದೇವಪ್ಪ, ಸುಂದ್ರೇಶ್, ಉಮೇಶ್,ಪತ್ರಕರ್ತ ತನು ಕೊಟ್ಟಿಗೆಹಾರ, ಸುರೇಂದ್ರ ಇದ್ದರು.
————–ಆಶಾ ಸಂತೋಷ್ ಅತ್ತಿಗೆರೆ