ಅರಕಲಗೂಡು-ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ ಯನ್ನು ಪ್ರಪಂಚಕ್ಕೆ ಪರಿಚಯಿಸಿದ ಮಹನೀಯರು-ಪ್ರದೀಪ್ ರಾಮಸ್ವಾಮಿ

ಅರಕಲಗೂಡು-ಪಟ್ಟಣದ ಶಿಕ್ಷಕರ ಭವನದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ವತಿಯಿಂದ ವಿವೇಕಾನಂದರ 162ನೇ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಯಿತು.

ಸ್ವಸ್ಥ ಸಮಾಜ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ರಾಮಸ್ವಾಮಿಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ,ಸ್ವಾಮಿ ವಿವೇಕಾನಂದರು ತಮ್ಮ ಕಡಿಮೆ ಜೀವಿತಾವಧಿಯಲ್ಲಿ ಭಾರತದ ಪರಂಪರೆ ಹಾಗು ಸಂಸ್ಕೃತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿವಂತರು.ಹಾವಾಡಿಗರ,ಕೊಳಕರ ದೇಶವೆಂದು ಭಾರತದ ಬಗ್ಗೆ ಅಸಡ್ಡೆಯ ಭಾವನೆಯನ್ನು ಹೊಂದಿದ್ದ ಬಿಳಿಯರಲ್ಲಿ ಭಾರತೀಯರ ಬಗ್ಗೆ ಬೇರೆಯದ್ದೇ ಭಾವನೆ ಮೂಡಿಸುವಲ್ಲಿ ಅವರು ಸಫಲರಾಗಿದ್ದರು ಎಂದರು.

ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಮ್ಮ ಯುವ ಸಮುದಾಯ ನಡೆದದ್ದೇ ಆದಲ್ಲಿ ಜಯ ಕಟ್ಟಿಟ್ಟ ಬುತ್ತಿ.ಇಂದು ಮಹನೀಯರ ಆದರ್ಶಗಳನ್ನು ಓದಿಕೊಂಡು ಬದುಕು ರೂಪಿಸಿಕೊಳ್ಳಬೇಕಾದ ಯುವ ಸಮುದಾಯ ಮೊಬೈಲ್ ಗೀಳಿಗೆ ಬಿದ್ದು ತಮ್ಮ ಬದುಕುಗಳನ್ನು ಕತ್ತಲ ಕೂಪಕ್ಕೆ ತಳ್ಳಿಕೊಳ್ಳುತ್ತಿದೆ ಎಂದು ಪ್ರದೀಪ್ ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರು ಸಣ್ಣ ವಯಸ್ಸಿನಲ್ಲಿಯೇ ಪ್ರಭುದ್ದತೆ, ಭವಿಷ್ಯದ ಬಗೆಗೆ ಸ್ಪಷ್ಟ ಗುರಿಯನ್ನು ಹೊಂದಿದ್ದ ಕಾರಣಕ್ಕೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದೆ ಅಲ್ಲದೆ ಜನಮಾನಸದಲ್ಲಿ ಇಂದಿಗೂ ಶಾಶ್ವತವಾಗಿ ಉಳಿದಿದ್ದಾರೆ.ಯುವ ಸಮುದಾಯ ಸ್ವಾಮಿ ವಿವೇಕಾನಂದರನ್ನು ಓದಿಕೊಂಡು ತಮ್ಮ ಭವಿಷ್ಯವನ್ನು ಭವ್ಯವಾಗಿ ಕಟ್ಟಿಕೊಳ್ಳಬೇಕು ಎಂದು ಅವರು ಸಲಹೆ ಕೊಟ್ಟರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.ಪ್ರಭಂದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಪ್ರಾಂಶುಪಾಲರಾದ ಬಸವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೃಷ್ಣಯ್ಯ, ಲೋಕೇಶ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಮಾದೇಶ್, ಸಿದ್ದರಾಮಯ್ಯಗೌಡ, ಪಾಂಡುರಂಗ, ಟಿಪ್ಪು, ದಡದಳ್ಳಿ ಜಗದೀಶ್, ವಕೀಲ ಶಂಕ್ರಯ್ಯ, ಮುಂತಾದವರು ಇದ್ದರು.

————–—ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?