ಕೊರಟಗೆರೆ:-ತಾಲ್ಲೂಕಿನ ಸಿ ಎನ್ ದುರ್ಗಾ ಹೋಬಳಿಯ ಅಗ್ರಹಾರ ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ ಭಕ್ತಿಗೀತೆಯ ಭಜನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಸುಮಾರು 300 ಅಯ್ಯಪ್ಪಸ್ವಾಮಿ ಮಾಲಾದಾರಿ ಸ್ವಾಮಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ದಕ್ಷಿಣ ಭಾರತದ ಪ್ರಸಿದ್ದ ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳನ್ನು ತುಮಕೂರಿನ ಅಯ್ಯಪ್ಪ ಸ್ವಾಮಿ ದೇವಾಲಯದ ಗುರುಗಳು ಹಾಗೂ ಹೆಸರಾಂತ ಗುರುಸ್ವಾಮಿಗಳಾದ ದಿವಂಗತ ಶ್ರೀ ಆನಂದರಾಮು ಶಿಷ್ಯರಾದ ಮಂಜುನಾಥ್ ಸ್ವಾಮಿಗಳು ಮತ್ತು ತಂಡ ಅದ್ಬುತವಾದ ಹಾಡಿದರು.
ಭಕ್ತಿಗೀತೆ ಗಾಯನದ ಜೊತೆಯಲ್ಲಿಯೇ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ಎಲ್ಲಾ ರೀತಿಯ ಧಾರ್ಮಿಕ ವಿದಿ ವಿಧಾನದಲ್ಲಿ ಅಭಿಷೇಕ ಪೂಜೆಯನ್ನು ಸಲ್ಲಿಸಿ ನಂತರ ಪಡಿಪೂಜೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು.
ಅಯ್ಯಪ್ಪ ಸ್ವಾಮಿ ಭಜನಾ ಕಾರ್ಯಕ್ರಮದಲ್ಲಿ ತಾಲೂಕಿನ ಸುತ್ತಮುತ್ತಲ ಸುಮಾರು 300ಕ್ಕೂ ಅಧಿಕ ಅಯ್ಯಪ್ಪಸ್ವಾಮಿ ಮಾಲಾದಾರಿ ಸ್ವಾಮಿಗಳು ಹಾಗೂ 200 ಅಧಿಕ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಭಾಗವಹಿಸಿದ್ದರು.ಬಂದಂತಹ ಎಲ್ಲಾ ಭಕ್ತರಿಗೂ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು.
—————--ಶ್ರೀನಿವಾಸ್ ಕೊರಟಗೆರೆ